ಪಿಜಕಳ : ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆ ಗೊಂಡ ಶ್ರೀಮತಿ ಚೇತನಾರಿಗೆ ಬೀಳ್ಕೊಡುಗೆ

(ನ್ಯೂಸ್ ಕಡಬ) newskadaba.com ಪಿಜಕಳ, ಡಿ.08:ಪಿಜಕಳ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಎಸ್.ಡಿ.ಎಮ್.ಸಿ ಹಾಗೂ ಕುಮಾರಧಾರ ಯುವಕ ಮಂಡಲ ಪಿಜಕಳ, ಹಾಗೂ ಊರಿನ ವಿದ್ಯಾಭಿಮಾನಿಗಳ ಜಂಟಿ ಆಶ್ರಯದಲ್ಲಿ ಪಿಜಕಳ ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆ ಗೊಂಡ ಶ್ರೀಮತಿ ಚೇತನಾ ಇವರಿಗೆ ಬೀಳ್ಕೊಡುಗೆ ಸಮಾರಂಭ ಪಿಜಕಳ ಶಾಲಾ ಸಭಾಂಗಣ ದಲ್ಲಿ ದಿ.06ರಂದು ನಡೆಯಿತು.

ಸಭಾ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಮೋಹನ ಗೌಡ ಗೊಡಾಲು ವಹಿಸಿದರು. ಮುಖ್ಯ ಅಥಿತಿಗಳಾಗಿ -ರಾಮಕೃಷ್ಣ ಮಲ್ಲಾರ, ಪ್ರಧಾನ ಕಾರ್ಯದರ್ಶಿ ಶಿಕ್ಷಕರ ಸಂಘ,ನಾಗರಾಜ್ ಓ ಏ ಅಧ್ಯಕ್ಷರು ಪತ್ರಕರ್ತ ಸಂಘ, ಊರಿನ ಹಿರಿಯರಾದ ಹರಿಯಪ್ಪ ಗೌಡ ಗೊಡಲು, ಸಾಂತಪ್ಪ ಗೌಡ ಪಿಜಕಳ ನಿವೃತ್ತ ಮುಖ್ಯ ಶಿಕ್ಷಕರು, ಕುಸುಮಾಧರ ಗೌಡ ಮುಖ್ಯ ಶಿಕ್ಷಕರು ಸ. ಕಿ. ಪ್ರಾ. ಶಾಲೆ ಪಿಜಕಳ,ರುಕ್ಮಿಣಿ ಕೆ ಬಿ ನಿವೃತ್ತ ಪದವೀಧರೇತರ ಮುಖ್ಯ ಶಿಕ್ಷಕಿ,ಸಚಿನ್ ಪಿ ಆರ್ ಅಧ್ಯಕ್ಷರು ಕುಮಾರದಾರ ಯುವಕ ಮಂಡಲ,ಗಂಗಮ್ಮ ಅಂಗನವಾಡಿ ಕಾರ್ಯಕರ್ತೆ ಮುಂತಾದವರು ಉಪಸ್ಥಿತರಿದ್ದು ಶುಭಹಾರೈಸಿದರು.

Also Read  ಗೃಹರಕ್ಷಕ ದಳ ಕಚೇರಿಯಲ್ಲಿ ಗಣರಾಜ್ಯೋತ್ಸವ ಸಂಭ್ರಮ

ಕಾರ್ಯಕ್ರಮ ದಲ್ಲಿ ಪ್ರಮುಖರಾದ ಶ್ಯಾಮ್ ಥಾಮಸ್, ಸುಂದರ ಗೌಡ ಪಾಲೋಳಿ, ಕಿರಣ್ ಕೋಡಿ, ಆನಂದ ಗೌಡ ಕೊಂಕ್ಯಾಡಿ , ಶಿಕ್ಷಕಿ ದಯಾಮಣಿ ದೇವಿಪ್ರಸಾದ್, ಅರುಣ್ ಕುಮಾರ್ ಕಂಗುಳೆ, ಜೀವನ್ ಪ್ರಕಾಶ್, ಪ್ರಭಾಕರ್, ಹರೀಶ್ ಕಂಗುಳೆ, ದಯಾನಂದ ಗೌಡ ಪೋಯ್ಯತ್ತಡ್ಡ, ಹಾಗೂ ಊರಿನ ಪ್ರಮುಖರು,ಶಾಲಾ ವಿದ್ಯಾರ್ಥಿಗಳು, ಉಪಸ್ಥಿತರಿದ್ದರು. ಶ್ರೀಮತಿ ಚೇತನಾ ಇವರಿಗೆ ಶಾಲು, ಫಲ ಪುಷ್ಪ, ಸನ್ಮಾನ ಪತ್ರ,ಚಿನ್ನದ ಉಂಗುರ ನೀಡಿ ಬೀಳ್ಕೊಡಲಾಯಿತು. ಶ್ಯಾಮ್ ಥಾಮಸ್ ರವರು ಸ್ವಾಗತಿಸಿದರು, ಆನಂದ ಗೌಡ ಕೊಂಕ್ಯಾಡಿ ಸನ್ಮಾನ ಪತ್ರ ವಾಚಿಸಿದರು, ಸುಂದರ ಪಾಲೋಳಿ ವಂದಿಸಿದರು, ಸಚಿನ್ ಪಿ ಆರ್ ಕಾರ್ಯಕ್ರಮ ನಿರೂಪಿಸಿದರು.

Also Read  ತಂದೆಯಿಂದಲೇ ಅತ್ಯಾಚಾರ- ಅಪ್ರಾಪ್ತೆ ಗರ್ಭಿಣಿ ಪೋಕ್ಸೋ ಪ್ರಕರಣ ದಾಖಲು

error: Content is protected !!
Scroll to Top