ಹಿರಿಯ ಪತ್ರಕರ್ತ, ನಿವೃತ್ತ ಪ್ರಾಚಾರ್ಯ ಕೆ ದಾಮೋದರ ಐತಾಳ ನಿಧನ

(ನ್ಯೂಸ್ ಕಡಬ) newskadaba.com ಉಡುಪಿ, ಡಿ.08: ಹಿರಿಯ ಪತ್ರಕರ್ತ, ನಿವೃತ್ತ ಪ್ರಾಚಾರ್ಯ ಕೆ ದಾಮೋದರ ಐತಾಳ ನಿಧನರಾಗಿದ್ದಾರೆ.

 ಅನೇಕ ವರ್ಷಗಳ ಕಾಲ ನಾಡಿನ‌ ವಿವಿಧ ಶಿಕ್ಷಕ ತರಬೇತಿ ಕಾಲೇಜುಗಳಲ್ಲಿ ಪ್ರಾಧ್ಯಾಪಕ , ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ , ಪತ್ರಕರ್ತರಾಗಿ  ಉಡುಪಿ ಬಳಕೆದಾರರ ವೇದಿಕೆ ವಿಶ್ವಸ್ಥ, ತುಳು ಶಿವಳ್ಳಿ ಮಾಧ್ವ ಮಹಾಮಂಡಲದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ , ಪ್ರತಿಷ್ಠಿತ ಉಡುಪಿ ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕ್ ಸ್ಥಾಪನೆಗೆ ಶ್ರಮಿಸಿದ್ದ ಹಿರಿಯ ಸಾಮಾಜಿಕ ಧುರೀಣ ಕೆ ದಾಮೋದರ ಐತಾಳರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.ಅವರ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.

Also Read  ಮೀನು ಹಿಡಿಯಲು ಹೋದಾಗ ಅಪರಿಚಿತರು ಹಾರಿಸಿದ ಗುಂಡು ತಗುಲಿ ಯುವಕ ಮೃತ್ಯು..!!

error: Content is protected !!
Scroll to Top