ಭಾರತ ಬಂದ್ ಗೆ ಕಡಬದಲ್ಲಿ ನೀರಸ ಪ್ರತಿಕ್ರಿಯೆ,ಎಂದಿನಂತೆ ಜನಜೀವನ ➤ ಕ.ತಾಲೂಕು ರೈತ ಸಂಘದಿಂದ ಕೆಲಕಾಲ ರಸ್ತೆ ತಡೆದು ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಡಿ.08: ಕೆಂದ್ರ ಸರಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳ ಒಕ್ಕೂಟಗಳು ಕರ್ನಾಟಕದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಈ ಪ್ರತಿಭಟನೆಯ ಬಿಸಿ ಕಡಬಕ್ಕೆ ತಟ್ಟಿಲ್ಲ.

ಕಡಬ ತಾಲೂಕಿನ ರೈತ ಸಂಘದ ವತಿಯಿಂದ ವರ್ತರಲ್ಲಿ ಭಾರತ ಬಂದ್ ಗೆ ಬೆಂಬಲಿಸುವಂತೆ ಮನವಿ ಮಾಡಿದ್ದರು ಆದರೆ, ಕಡಬದಲ್ಲಿ ಎಂದಿನಂತೆ ಜನಜೀವನ ವಾಹನ ಸಂಚಾರ ಕಂಡು ಬಂದಿದ್ದು ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇನ್ನು ರೈತ ಸಂಘದಿಂದ ಕೆಲಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.  ಆಟೋ ರಿಕ್ಷಾಗಳು, ಹೋಟೆಗಳು, ಅಂಗಡಿ ಮುಂಗಟ್ಟುಗಳು, ಪೆಟ್ರೋಲ್ ಬಂಕ್ ಗಳು, ತರಕಾರಿ ಮಾರುಕಟ್ಟೆಗಳು ಸೇರಿದಂತೆ ಎಲ್ಲಾ ರೀತಿಯ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ. ಇನ್ನು ಬಂದ್ ಹಿನ್ನಲೆಯಲ್ಲಿ ಕಡಬ ಪೊಲೀಸರು ಬಂದೋ ಬಸ್ತ್ ಏರ್ಪಡಿಸಿದ್ದಾರೆ.

Also Read  ಕಡಬದ ಸಸ್ಯಾಹಾರಿ ಹೊಟೇಲ್ ಶಾಂತಿಸಾಗರ್ ಪುನರಾರಂಭ ➤ ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಹೊಟೇಲ್

 

 

 

error: Content is protected !!
Scroll to Top