ಏಕಾಂಗಿಯಾಗಿ ವಾಸಿಸುತ್ತಿದ್ದ ಮಹಿಳೆಗೆ ಹೃದಯಾಘಾತ ➤ ವಾರದ ಬಳಿಕ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹ

(ನ್ಯೂಸ್ ಕಡಬ) newskadaba.com ಕಾಪು, ಡಿ.08: ಕಾಪುವಿನ ವಸತಿ ಸಂಕೀರ್ಣವೊಂದರಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಮಹಿಳೆಯೋರ್ವರು ಹೃದಯಾಘಾತದಿಂದ ಮೃತ ಪಟ್ಟ ಘಟನೆ ಒಂದು ವಾರದ ಬಳಿಕ ಬೆಳಕಿಗೆ ಬಂದಿದೆ.ಕಾಪುವಿನ ಕಾಪುವಿನ ಸಿಟಿ ಸಂಟರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಯಾರ ಜೊತೆಗೆ ಬೆರೆಯುತ್ತಿರಲಿಲ್ಲ, ತಾನಯ್ತು ತನ್ನ ಕೆಲಸವಾಯ್ತು ಎಂಬಂತೆ ಇದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಸೋಮವಾರ ಬೆಳಗ್ಗಿನ ಜಾವ ಅವರ ರೂಮಿನಿಂದ ಕೆಟ್ಟ ವಾಸನೆ ಹೊರ ಬರುತ್ತಿದ್ದದ್ದನ್ನು ಗಮನಿಸಿದ ಪಕ್ಕದ ಕೋಣೆಯ ನಿವಾಸಿಗಳು ಕಾಪು ಪೋಲಿಸರಿಗೆ ತಿಳಿಸಿದ್ದಾರೆ. ಕಾಪು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ, ರೂಮಿನ ಬಾಗಿಲು ಒಡೆದು ನೋಡಿದಾಗ, ಮಹಿಳೆಯ ಮೃತದೇಹ ಕೊಳೆತ ರೀತಿಯಲ್ಲಿ ಪತ್ತೆಯಾಗಿದೆ. ಮಹಿಳೆಯು ಹೃದಯ ರೋಗದಿಂದ ಬಳಲುತ್ತಿದ್ದು, ಆಕೆಗೆ ಹೃದಯಾಘಾತ ಆಗಿರಬೇಕೆಂಬ ಪೋಲಿಸರು ಶಂಕಿಸಿದ್ದಾರೆ.ಸ್ಥಳಕ್ಕೆ ಠಾಣಾಧಿಕಾರಿ ರಾಘವೇಂದ್ರ ಹಾಗೂ ಎಎಸ್‌ಐ ರಾಜೇಂದ್ರ ಮಣಿಯಾಣಿ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.

Also Read  ಮಂಗಳೂರು: ತಪಾಸಣೆ ವೇಳೆ ಜೈಲು ಸಿಬ್ಬಂದಿ ಬಳಿ ಗಾಂಜಾ ಪತ್ತೆ

 

error: Content is protected !!
Scroll to Top