ಮೂಡುಬಿದಿರೆ :ಪಾಳು ಬಿದ್ದ ಕಟ್ಟಡದಲ್ಲಿ ನೇಣಿಗೆ ಶರಣಾದ ಯುವಕ

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ಡಿ.08: ಯುವಕನೋರ್ವ ಡಿ.07 ರ ಸಂಜೆ ಮನೆ ಸಮೀಪದ ಪಾಳುಬಿದ್ದ ಕಟ್ಟಡದಲ್ಲಿ ಅತ್ಮಹತ್ಯೆ ಮಾಡಿಕೊಂಡಿದ್ದಾನೆ.

 

 

Xl

ಅಳಿಯೂರಿನ ನಿವಾಸಿ ತಿಮ್ಮಪ್ಪ ದೇವಾಡಿಗ ಎಂಬವರ ಪುತ್ರ ಸಂದೀಪ್( 22) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಶಿರ್ತಾಡಿ ಪೇಟೆಯ ಮೆಡಿಕಲ್ ನಲ್ಲಿ ಉದ್ಯೋಗಿಯಾಗಿದ್ದು, ಕೆಲಸ ಮುಗಿದ ಬಳಿಕ ಸಂಜೆ ನಾಲ್ಕು ಗಂಟೆಗೆ ಮನೆಗೆ ಬಂದಿದ್ದ. ಬಳಿಕ ಮನೆ ಪರಿಸರದಲ್ಲಿ ಸುತ್ತಾಡಿ ಬರುವೆನ್ನೆಂದು ಹೇಳಿ ಹೋಗಿದ್ದ. ರಾತ್ರಿ ವೇಳೆಗೆ ಸಂದೀಪ್ ಮನೆಗೆ ಮನೆಗೆ ಬಾರದಿರುವುದನ್ನು ಕಂಡು, ಮನೆಯವರು ಮನೆ ಸಮೀಪ ಹುಡುಕಾಡಿದಾಗ ಪಾಳು ಬಿದ್ದ ಕಟ್ಟಡದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದದೆ. ಈ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ➤➤ Breaking news ಕಡಬದಲ್ಲಿ ಲಾಠಿ ಚಾರ್ಜ್ ➤ ಪೇಟೆಗೆ ಬಂದಿದ್ದವರಿಗೆ ಲಾಠಿಯ ಬಿಸಿ ಮುಟ್ಟಿದ ಕಡಬಪೊಲೀಸರು

error: Content is protected !!
Scroll to Top