ಕಡಬ ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ವರ್ಗಾವಣೆ ಆದೇಶಕ್ಕೆ ತಡೆ ➤ ಆಡಳಿತಾತ್ಮಕ ನ್ಯಾಯ ಮಂಡಳಿಯಿಂದ ಮಧ್ಯಂತರ ಆದೇಶ

(ನ್ಯೂಸ್ ಕಡಬ) newskadaba.com ಕಡಬ, ಡಿ.07. ಕಡಬ ತಾಲ್ಲೂಕು ಕಚೇರಿಯಲ್ಲಿ ಕಂದಾಯ ನಿರೀಕ್ಷಕರಾಗಿ ಕರ್ತವ್ಯದಲ್ಲಿದ್ದ ಅವಿನ್ ರಂಗತ್ತಮಲೆ ಅವರ ವರ್ಗಾವಣೆ ಆದೇಶಕ್ಕೆ ಬೆಂಗಳೂರಿನ ಆಡಳಿತಾತ್ಮಕ ನ್ಯಾಯ ಮಂಡಳಿಯು ತಡೆ ನೀಡಿದೆ.

ಕಡಬ ತಾಲೂಕು ಕಂದಾಯ ನಿರೀಕ್ಷಕರಾಗಿ ಗೋಪಾಲ ಕೆ. ಎಂಬವರನ್ನು ಬಂಟ್ವಾಳದಿಂದ ಕಡಬಕ್ಕೆ ವರ್ಗಾಯಿಸಿ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು ನವೆಂಬರ್ 21ರಂದು ಆದೇಶವನ್ನು ಹೊರಡಿಸಿದ್ದರು. ಸದರಿ ಆದೇಶದ ವಿರುದ್ಧ ಅವಿನ್ ರಂಗತ್ತಮಲೆಯವರು ಅವಧಿಗೆ ಮುನ್ನ ಹಾಗೂ ಬೇರೆ ಯಾವುದೇ ಕೆಲಸದ ಜಾಗವನ್ನು ತೋರಿಸದೆ ವರ್ಗಾವಣೆ ಮಾಡಿದ ಸರ್ಕಾರದ ಆದೇಶವನ್ನು ರದ್ದುಪಡಿಸುವಂತೆ ಕೋರಿ ವಕೀಲರ ಮುಖಾಂತರ ಬೆಂಗಳೂರಿನ ಆಡಳಿತಾತ್ಮಕ ನ್ಯಾಯ ಮಂಡಳಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಇವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಭಕ್ತವತ್ಸಲ ಅವರಿದ್ದ ಪೀಠವು ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶವನ್ನು ಹೊರಡಿಸಿದೆ. ಅರ್ಜಿದಾರ ಅವಿನ್ ರಂಗತ್ತಮಲೆಯವರ ಪರವಾಗಿ ನ್ಯಾಯವಾದಿ ವಿಘ್ನೇಶ್ ಉಬ್ರಾಳರವರು ವಾದಿಸಿದ್ದರು.

Also Read  ನಿಮ್ಮ ಕಷ್ಟಗಳು ಪರಿಹಾರ ಬೇಗ ಆಗಬೇಕೆಂದರೆ ಲಾಭ ಪಡೆಯಲು ಈ ಕೆಲಸ ಮಾಡಬೇಕು

error: Content is protected !!
Scroll to Top