(ನ್ಯೂಸ್ ಕಡಬ) newskadaba.com ಕಡಬ, ಡಿ.07. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಆರ್‌ಪಿಎಲ್‌ನವರ ಪ್ರಥಮ ಡೀಲರ್ ಔಟ್‌ಲೆಟ್ ಆಗಿರುವ ಎಂಆರ್‌ಪಿಎಲ್ ಹೆಚ್‌ಐಕ್ಯು(ಹೈ ಕ್ವಾಲಿಟಿ) ಪೆಟ್ರೋಲ್ ಪಂಪ್ ರತ್ನಶ್ರೀ ಎಂಟರ್‌ಪ್ರೈಸಸ್ ಸೋಮವಾರದಂದು ಆಲಂಕಾರಿನಲ್ಲಿ ಶುಭಾರಂಭಗೊಂಡಿತು.
ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು, ಗಿಡಕ್ಕೆ ನೀರು ಹಾಕುವ ಮೂಲಕ ಕಚೇರಿ ಉದ್ಘಾಟಿಸಿ ಬಳಿಕ ನಡೆದ ಸರಳ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಎಂಆರ್‌ಪಿಎಲ್‌ನ ಮಾರ್ಕೆಟಿಂಗ್ ವಿಭಾಗದ ಗ್ರೂಪ್ ಜನರಲ್ ಮ್ಯಾನೇಜರ್ ಹೆಚ್.ಸಿ.ಸತ್ಯನಾರಾಯಣರವರು ಉದ್ಘಾಟಿಸಿದರು. ಮಾಲಕ ರಾಧಾಕೃಷ್ಣ ಕೆ.ಎಸ್. ರವರು, ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಲಕರ ಸಹೋದರ ಸತೀಶ್ ಕೆ.ಎಸ್.ದುರ್ಗಾಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಂಆರ್‌ಪಿಎಲ್‌ನ ಮಾರ್ಕೆಟಿಂಗ್ ವಿಭಾಗದ ಗ್ರೂಪ್ ಜನರಲ್ ಮ್ಯಾನೇಜರ್ ಹೆಚ್.ಸಿ.ಸತ್ಯನಾರಾಯಣರವರಿಗೆ ಶಾಲು, ಹಾರ, ಸ್ಮರಣಿಕೆ, ಫಲತಾಂಬೂಲ ನೀಡಿ ಸಂಸ್ಥೆಯ ಪರವಾಗಿ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಗೌರವಿಸಿದರು. ಇಂಜಿನಿಯರ್ ರಾಮಚಂದ್ರ ಘಾಟೆ, ಎಂಆರ್‌ಪಿಎಲ್ ಗುತ್ತಿಗೆದಾರ ಪ್ರಕಾಶ್, ಮೇಸ್ತ್ರಿಗಳಾದ ಜನಾರ್ದನ, ಬಾಲಕೃಷ್ಣ, ಸೆಂಟ್ರಿಂಗ್ ಕೆಲಸ ನಿರ್ವಹಿಸಿದ ಶಿವರಾಮ, ಪ್ಲಂಬಿಂಗ್ ಮತ್ತು ವಯರಿಂಗ್ ಕಾಮಗಾರಿ ಮಾಡಿದ ಮೋನಪ್ಪ, ಆಲಂಕಾರು ಶರವು ಇಂಡಸ್ಟ್ರೀಸ್‌ನ ಪ್ರಶಾಂತ್ ರೈ, ಮನಮೋಹನ್ ರೈ ಬೆಟ್ಟಂಪಾಡಿ, ಎಂಆರ್‌ಪಿಎಲ್‌ನ ಇಂಜಿನಿಯರ್‌ಗಳಾದ ಲಕ್ಷ್ಮೀಶ ರಾವ್, ಸ್ವಾಮಿ ಪ್ರಸಾದ್‌ರವರನ್ನೂ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸಂಸ್ಥೆಯ ಪರವಾಗಿ ಸುಬ್ರಹ್ಮಣ್ಯ ಸ್ವಾಮೀಜಿ ಗೌರವಿಸಿದರು. ಮೊದಲ ಗ್ರಾಹಕರಾದ ಉಪ್ಪಿನಂಗಡಿಯ ರಾಜ್ ಬೋರ್‌ವೆಲ್ಸ್‌ನ ಕೃಷ್ಣರಾಜ್ ಭಟ್, ನೆಕ್ಕರೆಯ ಬಾಬು ಮೇಸ್ತ್ರಿಯವರನ್ನೂ ಸ್ವಾಮೀಜಿ ಗೌರವಿಸಿದರು. ರತ್ನಶ್ರೀ ಎಂಟರ್‌ಪ್ರೈಸಸ್‌ನ ಮೇನೇಜರ್ ಶ್ರೀನಿಧಿ ವಂದಿಸಿದರು. ರಾಮಕುಂಜೇಶ್ವರ ಪ.ಪೂ.ಕಾಲೇಜಿನ ಉಪನ್ಯಾಸಕ ಗಣರಾಜ್ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.