ಕೊವೀಡ್ ಗೆ ಬಲಿಯಾದ ಕಿರುತೆರೆ ನಟಿ.!

(ನ್ಯೂಸ್ ಕಡಬ) newskadaba.com ಮುಂಬೈಡಿ. 07: ಕೊರೊನಾದಿಂದ ಬಳಲುತ್ತಿದ್ದ ಕಿರುತೆರೆ ನಟಿ ದಿವ್ಯಾ ಭಟ್ನಾಗರ್ ಅವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಯೇ ರಿಶ್ತಾ ಕ್ಯಾ ಕೆಹಲಾತಾ ಹೈ, ಉಡಾನ್, ಜೀತ್ ಗಯಿ ತೋ ಪಿಯಾ ಮೋ ಸೇರಿದಂತೆ ಹಲವು ಧಾರಾವಾಹಿಗಳು ಹಾಗೂ ಕೆಲವು ಸಿನಿಮಾಗಳಲ್ಲಿ ದಿವ್ಯಾ ನಟಿಸಿದ್ದರು.ನಟಿ ಶಿಲ್ಪಾ ಶಿರೋಡ್ಕರ್ ಇನ್ಸ್ಟಾಗ್ರಾಮ್ ಮೂಲಕ ಸಂತಾಪ ಸೂಚಿಸಿದ್ದು, ಭಟ್ನಾಗರ್ ಅವರು ನನ್ನ ಪ್ರೀತಿಯ ಗೆಳತಿಯಾಗಿದ್ದಳು, ಆಕೆಯ ನಿಧನದಿಂದ ನನಗೆ ತುಂಬಾ ದುಃಖವಾಗಿದೆ ಎಂದು ಬರೆದಿದ್ದಾರೆ. ನಟಿ ದೇವಲೋನಾ ಸೇರಿದಂತೆ ಹಲವು ಕಿರುತೆರೆ ಕಲಾವಿದರು, ತಂತ್ರಜ್ಞರು ದಿವ್ಯಾರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

Also Read  ಬೆಳ್ತಂಗಡಿ: ಸೂಪರ್‌ ಮಾರ್ಕೆಟ್‌ನಲ್ಲಿ ಆಕಸ್ಮಿಕ ಬೆಂಕಿ    ➤ ಲಕ್ಷಾಂತರ ಮೌಲ್ಯದ ವಸ್ತು ನಾಶ

 

error: Content is protected !!
Scroll to Top