ಕಾರಾವಾರ :ಪತ್ನಿಗೆ ಗುಂಡು ಹಾರಿಸಿ ನಾಟಕವಾಡಿದ ಪತಿರಾಯ ಅಂದರ್

(ನ್ಯೂಸ್ ಕಡಬ) newskadaba.com ಕಾರಾವಾರ , ಡಿ. 07: ಪತ್ನಿಯ ಶೀಲ ಶಂಕಿಸಿ ಪತಿರಾಯ ಕೋವಿಯಿಂದ ಪತ್ನಿಗೆ ಗುಂಡು ಹಾರಿಸಿ, ಕೊನೆಗೆ ಪೊಲೀಸರ ಅತಿಥಿಯಾಗಿದ್ದಾನೆ. ಗೋಯರ್ ಅರಣ್ಯ ಪ್ರದೇಶದಲ್ಲಿ ಡಿಸೆಂಬರ್ 4ರಂದು ಕಟ್ಟಿಗೆ ತರಲು ರಷಿಕಾ ತೆರಳಿದ್ದು ಈ ವೇಳೆ ಎಲ್ಲಿಂದಲೋ ಸಿಡಿದ ಗುಂಡು ಗಾಯಗೊಳಿಸಿತ್ತು ಎಂದು ತನ್ನ ಪತ್ನಿಗೆ ಗಾಯವಾದ ಬಗ್ಗೆ ಪತಿ ದೂರು ದಾಖಲಿಸಿದ್ದ.

ತನಿಖೆ ಕೈಗೆತ್ತಿಕೊಂಡ ಪೊಲೀಸರು ಪತಿಯನ್ನೆ ವಿಚಾರಿಸಿದ್ದರು. ಪೊಲೀಸರ ದಾರಿ ತಪ್ಪಿಸಲು ಹೋದ ಪತಿ ರಮೇಶ ದೇಸಾಯಿ ಈಗ ಪೊಲೀಸ್ ಅತಿಥಿಯಾಗಿದ್ದಾನೆ.ಪತ್ನಿಯ ಶೀಲ ಶಂಕಿಸಿ ಈ ಕೃತ್ಯ ನಡೆಸಿದ್ದಾಗಿ ಆರೋಪಿ ಪೊಲೀಸರ ಮುಂದೆ ಮಾಹಿತಿ ನೀಡಿದ್ದಾನೆ. ಆರೋಪಿ ರಮೇಶನನ್ನು ಬಂಧಿಸಿದ ಕದ್ರಾ ಪೊಲೀಸರು ಈ ಕೃತ್ಯಕ್ಕೆ ಬಳಸಲಾದ ನಾಡ ಬಂದೂಕು, ಮದ್ದುಗುಂಡುಗಳು ಸೇರಿದಂತೆ ಇನ್ನಿತರೆ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Also Read  ಡಿ.7- ಆರೋಗ್ಯ ಸುರಕ್ಷಾ ಕಾರ್ಡ್, ಬೋಟ್ ಮಾಲಕರಿಗೆ ಪ್ರೋತ್ಸಾಹಕ ಉಡುಗೊರೆ ವಿತರಣೆ

 

error: Content is protected !!
Scroll to Top