(ನ್ಯೂಸ್ ಕಡಬ) newskadaba.com ಆಂಧ್ರ ಪ್ರದೇಶ, ಡಿ. 07: ಕೊರೊನದಿಂದ ಇಡೀ ಜಗತ್ತೇ ತತ್ತರಿಸಿದೆ. ಇದರ ನಡುವೆ ಇದೀಗ ಆಂಧ್ರ ಪ್ರದೇಶದಲ್ಲಿ ಹೊಸದೊಂದು ಕಾಯಿಲೆ ಕಾಣಿಸಿಕೊಂಡಿದ್ದು,ಜನರಲ್ಲಿ ಆತಂಕ ಮನೆ ಮಾಡಿದೆ.
ಆಂಧ್ರ ಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ಈ ವಿಚಿತ್ರ ಕಾಯಿಲೆ ಕಾಣಿಸಿಕೊಂಡಿದೆ. ಗೋದಾವರಿ ಜಿಲ್ಲೆಯ ಎಲೂರು ಪಟ್ಟಣದಲ್ಲಿ ಇದ್ದಕ್ಕಿದ್ದಂತೆ ಜನರು ಬಾಯಿಯಲ್ಲಿ ನೊರೆಬಂದು, ವಾಂತಿ, ಪ್ರಜ್ಞಾಹೀನರಾಗಿ ಬಿದ್ದಿರುವ ಘಟನೆಗಳು ನಡೆದಿವೆ.ಈ ಕಾಯಿಲೆಗೆ ಬಿದ್ದು ಈಗಾಗಲೇ ಓರ್ವ ವ್ಯಕ್ತಿ ಬಲಿಯಾಗಿದ್ದು, ಸುಮಾರು 290 ಮಂದಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ,