ಕಡಬ :ಜಾತ್ಯತೀತ ಜನತಾದಳ ಪಕ್ಷದ ಕಾರ್ಯಕಾರಿ ಸಮಿತಿ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರುಡಿ. 07: ಕರ್ನಾಟಕ ಪ್ರದೇಶ ಕಡಬ ತಾಲೂಕಿನ ಜಾತ್ಯತೀತ ಜನತಾದಳ ಪಕ್ಷದ ಕಾರ್ಯಕಾರಿ ಸಭೆಯು ಡಿ.6 ರಂದು ಕಡಬ ಜೂನಿಯರ್ ಕಾಲೇಜು ರಸ್ತೆ ಅಡ್ಡಗದ್ದೆಯಲ್ಲಿ ನಡೆಯಿತು. ಸಭೆಯಲ್ಲಿ ಕಡಬ ತಾಲೂಕಿನ 27 ಗ್ರಾಮ ಪಂಚಾಯತ್‍ಗೆ ಜಾತ್ಯತೀತ ಜನತಾದಳ ಪಕ್ಷದ ಆಭ್ಯರ್ಥಿಗಳನ್ನು ಚುನಾವಣೆಗೆ ಸ್ಪರ್ದಿಸುದೆಂದು ನಿರ್ಧರಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಸಯ್ಯದ್ ಮೀರಾ ಸಾಹೇಬ್ ವಹಿಸಿ ಮಾತನಾಡಿ ಕಡಬ ತಾಲೂಕಿನ 42 ಗ್ರಾಮಗಳಲ್ಲಿ , ಕಡಬ- ಕೋಡಿಂಬಾಳ ಕೈಬಿಟ್ಟು 40 ಗ್ರಾಮಗಳು ಹಾಗೂ 27 ಗ್ರಾ.ಪಂಗಳಲ್ಲಿ ಎಲ್ಲಾ ಸ್ಥಳಗಳಲ್ಲಿಯೂ ಪಕ್ಷದ ವತಿಯಿಂದ ಬೆಂಬಲಿಸಿ ಚುನಾವಣೆಗೆ ಸ್ಪರ್ಧಿಸುವಂತೆ ನಿರ್ಣಯ ತೆಗೆದುಕೊಳ್ಳಲಾಯಿತು. ಕಡಬ ಹೊಸ ತಾಲೂಕಿನ ಸೇರ್ಪಡೆ , ಮಿನಿವಿಧಾನ ಸೌಧ, ಹೊಸ್ಮಠ ಸೇತುವೆ, ಪಾಲೋಳಿ ಸೇತುವೆ, ತಾಲೂಕು ಕಚೇರಿಗಳು, ವಿದ್ಯುತ್ ಸಬ್‍ಸ್ಟೇಶನ್‍ಗಳು, ಹಲವಾರು ರಸ್ತೆಗಳು, ರೈತರಿಗೆ ಸೇವಾಸಹಕಾರಿ ಸಂಘಗಳ ಮುಖಾಂತರ ಲಕ್ಷ ರೂಪಾಯಿಗಳ ಸಹಾಯಧನ ನೀಡುವಲ್ಲಿ ಕುಮಾರಸ್ವಾಮಿ ನೇತೃತ್ವದ ಸರಕಾರ ಈ ಭಾಗದಲ್ಲಿ ಹೆಚ್ಚಿನ ಕೊಡುಗೆಯನ್ನು ನೀಡಿದ್ದು ರೈತರ ಪರ ಹಾಗೂ ಬಡವರ ಪರವಾಗಿ ಹಲವಾರು ಸೌಲಭ್ಯಗಳನ್ನು ನೀಡಿದ್ದು ಮುಂದಿನ ಗ್ರಾ.ಪಂ ಚುನಾವಣೆಯ ದಿಕ್ಸೂಚಿಯಾಗಿರುತ್ತದೆ ಎಂದು ತಿಳಿಸಿ ತಾಲೂಕಿನಾದ್ಯಂತ ಪಕ್ಷದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ವೀಕ್ಷಕರನ್ನಾಗಿ ಹಾಗೂ ಜವಾಬ್ದಾರಿಗಳನ್ನು ವಹಿಸುವಂತೆ ಸಭೆಯ ನಿರ್ಣಯದಂತೆ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.

ಬಳಿಕ ದ.ಕ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಸುಮತಿ ಹೆಗ್ಗಡೆಯವರು ಮಾತನಾಡಿ ಈ ಹಿಂದೆ ಮೂಡುಬಿದ್ರೆ ,ಬೆಳ್ತಂಗಡಿ, ತಾಲೂಕುಗಳಲ್ಲಿ ಜನತದಳ ಶಾಸಕರು ಇದ್ದು ಜಿಲ್ಲಾದ್ಯಂತ ಹಲವಾರು ಪಂಚಾಯತ್‍ಗಳು, ಸೇವಾ ಸಹಕಾರಿ ಸಂಘಗಳು, ಪುರಸಭೆಗಳು, ನಗರ ಪಾಲಿಕೆಗಳಲ್ಲಿ ಕೂಡಾ ನಮ್ಮ ಪಕ್ಷದ ಸದಸ್ಯರುಗಳು ಇದ್ದು ಈ ಬಾರಿ ಜಿಲ್ಲೆದಾದ್ಯಂತ ಎಲ್ಲಾ ಗ್ರಾಮ ಪಂಚಾಯತ್‍ಗಳಲ್ಲಿ ಸ್ಪರ್ದೆಯನ್ನು ನೀಡಲಿದ್ದು ಜನ ಬೆಂಬಲ ಕಂಡಿತ ನಮ್ಮ ಪಕ್ಷದ ಆಭ್ಯರ್ಥಿಗಳಿಗೆ ಸಿಗಲಿದೆ ಎಂದು ತಿಳಿಸಿ ಶುಭಹಾರೈಸಿದರು.

Also Read   ಡಿ. 3 ರಿಂದ 6 ರವರೆಗೆ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ

 

ಸುಳ್ಯ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ವೀಕ್ಷಕ ಜಾಕೆ ಮಾದವ ಗೌಡ ಮಾತನಾಡಿ ಈಗಾಗಲೇ ಅಧ್ಯಕ್ಷರು ವೀಕ್ಷಕರ ಪಟ್ಟಿಯನ್ನು ಬಿಡುಗಡೆಗೊಳಿಸಿ ಇರುವುದರಿಂದ ತಾವುಗಳು ಗ್ರಾಮಗಳಲ್ಲಿ ಸದಸ್ಯರ ಆಯ್ಕೆ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವುದಲ್ಲದೆ, ಕಡಬ ತಾಲೂಕಿನಾದ್ಯಂತ ಪಂಚಾಯತ್ ಸದಸ್ಯರುಗಳನ್ನಾಗಿ ಆಯ್ಕೆಮಾಡುವಲ್ಲಿ ಜವಾಬ್ದಾರಿ ನಿರ್ವಹಿಸುವಂತೆ ,ರಾಮಕೃಷ್ಣ ಹೆಗ್ಗಡೆಯವರು ಮಾಡಿದ ಹಲವಾರು ಕಾರ್ಯಕ್ರಮಗಳು, ಬೊಬ್ಬಯ್ಯವರು ಆದೇಶಿಸಿದ ಅಕ್ರಮ-ಸಕ್ರಮದ ಬಗ್ಗೆ ಗ್ರಾಮೀಣ ಭಾಗದ ರೈತರಿಗೆ , ಜನಸಾಮಾನ್ಯರಿಗೆ ಪ್ರಯೋಜನಾ ಉಂಟಾಗಿದೆ, ಜೆಡಿಎಸ್ ವರಿಷ್ಠ ದೇವೆಗೌಡ ಹಾಗೂ ಕುಮಾರಸ್ವಾಮಿಯವರು ಮಹಿಳೆಯರಿಗೆ ಹೆಚ್ಚಿನ ಮೀಸಲಾತಿ ಒದಗಿಸಿದ್ದು ಈ ಬಗ್ಗೆ ಕೂಡ ಜನರಲ್ಲಿ ಅರಿವು ಮೂಡಿಸುವಂತೆ ಕೋರಿಕೊಂಡರು.

ರೈತ ಸಂಘದ ತಾಲೂಕು ಅಧ್ಯಕ್ಷ ವಿಕ್ಟರ್ ಮಾರ್ಟಿಸ್ , ಮಾತನಾಡಿ ರೈತರ ಕುರಿತು ಕೆಲವು ಕಾನೂನುಗಳನ್ನು ತಂದು ರೈತರನ್ನು ಹತ್ತಿಕ್ಕುವಂತಹ ಕೆಲಸವನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಮಾಡುತ್ತಿದ್ದು ರೈತರು ಈಗಾಗಲೇ ಬೀದಿಪಾಲಾಗಿದ್ದು ಮುಂದಿನ 8 ರಂದು ಭಾರತ್ ಬಂದ್‍ಗೆ ಸಂಪೂರ್ಣ ಸಹಕಾರ ನೀಡಬೇಕಾಗಿ ಕೋರಿಕೊಂಡರು. ಕಡಬ ತಾಲೂಕು ವೀಕ್ಷಕ ಇಕ್ಬಾಲ್ ಎಲಿಮಲೆ ಜೆಡಿಎಸ್ ಮಾತನಾಡಿ ಮುಂಬರುವ ಚುನಾವಣೆಯಲ್ಲಿ ಗ್ರಾಮೀಣ ಜನರ ಮನವೋಲಿಸುಚವುದಲ್ಲದೆ ನಮ್ಮ ಸರಕಾರ ಮಾಡಿದ ಜನಪಯೋಗಿ ವಿಚಾರಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಂಚಾಯತ್ ಸದಸ್ಯರು ಆಯ್ಕೆಗೊಳ್ಳುವಂತೆ ಶ್ರಮ ವಹಿಸಿಕೊಳ್ಳಬೇಕಾಗಿ ಹೇಳಿಕೊಂಡರು.

Also Read  ಆತೂರು: ದಿಕ್ರ್ ಹಲ್ಕಾ ವಾರ್ಷಿಕೋತ್ಸವ ► ಅಲ್ಲಾಹುವಿನ ಸ್ನೇಹ ಸಂಪಾದನೆಗೆ ದಿಕ್ರ್, ಸ್ವಲಾತ್ ಉತ್ತಮ ಹಾದಿ-ತ್ವಾಖ ಅಹ್ಮದ್ ಮೌಲವಿ

 

 

ಜಿಲ್ಲಾ ಮಹಿಳಾ ಘಟಕದ ಪ್ರ.ಕಾರ್ಯದರ್ಶಿ ಜ್ಯೋತಿ ಪ್ರೇಮಾನಂದ ಮಾತನಾಡಿ ಮಹಿಳೆಯರಗೆ ಹೆಚ್ಚಿನ ಅವಕಾಶಗಳಿದ್ದು ಅದನ್ನು ಸದುಪಯೋಗ ಪಡಿಸಿಕೊಡಬೇಕಾಗಿ ಕೋರಿಕೊಂಡರು. , ಸೋಮಸುಂದರ ಕೂಜುಗೋಡು, ಸುರೇಶ್ ಕುಮಾರ್ ನಡ್ಕ, ಶಿವಾನಂದ, ಅಶೋಕ್ ಕೂಜುಗೋಡು, ಇಬ್ರಾಹಿಂ ಅಲೆಕ್ಕಾಡಿ, ಹರೀಶ್ ಎನ್ಕಾಜೆ, ಸ್ಕರಿಯ ಕೆ, ದಿನೇಶ್ ಎಂ.ಪಿ, ಚಂದ್ರಶೇಖರ ಚೆನ್ನಕಜೆ ಡಾ.ತಿಲಕ್ ಎ.ಎ, ಎಂ ಸುಂದರ, ವೆಂಕಪ್ಪ ಎನ್.ಪಿ, ಮಾದಪ್ಪ ಗೌಡ, ಎಂ.ಪಿ ದಿನೇಶ್, ಪಿ.ಯು ತೋಮಸ್, ಚಂದ್ರಶೇಖರ ಗೌಡ,ಉಬೈದುಲ್ಲ ಐತ್ತೂರು, ಇ.ಜಿ ಜೋಸೆಫ್, ರಜಿತ್ ಆರ್, ಸಜಿತ್ ಅಬ್ರಹಾಂ, ಹರಿಪ್ರಸಾದ್, ಎಂ.ಯು ತೋಮಸ್, ನಾರಾಯಣ ಎಂ, ಚಂದ್ರಶೇಖರ ಸಿ, ಪುರುಷೋತ್ತಮ ಎಂ, ಇಬ್ರಾಹಿಂ ಕೆ, ದಾಮೋದರ ಕೆ, ಪುತ್ತುಮೋನು, ಸಿ.ಎಸ್ ಬಿನು, ತಾಹಾ ಬಲ್ಯ,ಕೆ.ಜೆ ಜಾರ್ಜ್, ಕವಿತ, ಜಯಲಕ್ಷ್ಮೀ, ಕೈರುನ್ನಿಸಾ, ಶಿವಾನಂದ, ಸುನಂದ, ಅಶೋಕ್ ಕೆ ಮೊದಲಾದ ಜೆಡಿಎಸ್ ಮುಖಂಡರುಗಳು ಉಪಸ್ಥಿತರಿದ್ದರು. ಉಸ್ತುವಾರಿಗಳ ಪಟ್ಟಿಯನ್ನು ಕೂಡಾ ಇದರೊಂದಿಗೆ ಲಗತ್ತೀಕರಿಸಲಾಗಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಸಾಹೇಬರನ್ನು ಸಂಪರ್ಕಿಸಿ 9448394424, 9741511424

error: Content is protected !!
Scroll to Top