ವಿಶೇಷ ಪೊಲೀಸ್ ತಂಡದಿಂದ ಐವರು ಉಗ್ರರ ಅರೆಷ್ಟ್

(ನ್ಯೂಸ್ ಕಡಬ) newskadaba.com ದೆಹಲಿ ಡಿ. 07:ದೆಹಲಿ ಪೊಲೀಸರ ವಿಶೇಷ ತಂಡ ಇಂದು ನಗರದ ಶಕಾರ್ ಪುರ ಪ್ರದೇಶದಲ್ಲಿ ಐವರು ಉಗ್ರರನ್ನು ಬಂಧಿಸಿದೆ. ಬಂಧಿತ ಐವರು ಉಗ್ರರ ಪೈಕಿ ಇಬ್ಬರು ಪಂಜಾಬ್ ಮೂಲದವರು, ಮೂವರು ಕಾಶ್ಮೀರದವರು ಎಂದು ತಿಳಿದುಬಂದಿದೆ. ಬಂಧಿತ ಐವರು ಖಲಿಸ್ತಾನ್ ನ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದ್ದು, ಅವರಿಂದ ಶಸ್ತ್ರಾಸ್ತ್ರಗಳು ಮತ್ತು ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಮಧ್ಯೆ, ಭಯೋತ್ಪಾದಕರ ಬಂಧನದ ಹಿನ್ನೆಲೆಯಲ್ಲಿ ನಗರ ಪೊಲೀಸರು ತೀವ್ರ ನಿಗಾ ವನ್ನು ತೀವ್ರಗೊಳಿಸಿದ್ದಾರೆ. ಇದಕ್ಕೂ ಮುನ್ನ ನವೆಂಬರ್ ನಲ್ಲಿ ದೆಹಲಿ ಪೊಲೀಸರ ವಿಶೇಷ ದಳ ವು ಸರಾಯಿ ಕಾಳೆ ಖಾನ್ ಬಳಿ ಜೈಷ್ ಇ ಮೊಹಮ್ಮದ್ ಸಂಘಟನೆಯ ಇಬ್ಬರು ಉಗ್ರರನ್ನು ಬಂಧಿಸಿತ್ತು.

Also Read  ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್..? ➤ ದ.ಕ. ಸೇರಿದಂತೆ 10 ಜಿಲ್ಲೆಗಳಿಗೆ ಕೇಂದ್ರದಿಂದ ಎಚ್ಚರಿಕೆ

 

 

 

 

error: Content is protected !!
Scroll to Top