ಬೆಳ್ತಂಗಡಿ :ಎರಡು ಕಾರುಗಳ ನಡುವೆ ಪರಸ್ಪರ ಢಿಕ್ಕಿ ➤ ಪ್ರಯಾಣಿಕರಿಗೆ ಗಾಯ,ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ನಿಡ್ಲೆಡಿ. 07: ನಿಡ್ಲೆ ಕುದ್ರಾಯ ಸೇತುವೆ ಬಳಿ ಎರಡು ಕಾರುಗಳು ಪರಸ್ಪರ ಡಿಕ್ಕಿ ಹೊಡೆದಿದ್ದು, ಪ್ರಯಾಣಿಕರು ಗಾಯಗೊಂಡ ಘಟನೆ ಡಿ.7 ರ ಇಂದು ಮುಂಜಾನೆ ನಡೆದಿದೆ.

ಧರ್ಮಸ್ಥಳದ ಪ್ರಯಾಣಿಕರು ಧರ್ಮಸ್ಥಳದಿಂದ ಕೊಕ್ಕಡದ ಕಡೆಗೆ ಓಮ್ನಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಬೆಂಗಳೂರಿನಿಂದ ಧರ್ಮಸ್ಥಳ ಕಡೆಗೆ ಪ್ರಯಾಣಿಸುತ್ತಿದ್ದ ಸ್ಕೋಡಾ ವಾಹನ ಪರಸ್ಪರ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಎರಡೂ ವಾಹನಗಳಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದೆ. ಕೂಡಲೇ ಅವರನ್ನು ಉಜಿರೆ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ➤ ಅಣಬೆ ಬೇಸಾಯ ತರಬೇತಿ ಕಾರ್ಯಕ್ರಮ

error: Content is protected !!
Scroll to Top