ನೂಜಿಬಾಳ್ತಿಲದ ಸಮಕ್ತ್ ಜೈನ್ ಅವರಿಗೆ ಸನ್ಮಾನ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆಡಿ. 05:  ಭಾರತೀಯ ಜೈನ್ ಮಿಲನ್ ವಲಯ 8ರ ಅನಂತಪಾರ್ಶ್ವ ಜೈನ್ ಮಿಲನ್ ಕುಪ್ಪೆಪದವು ಶಾಖೆ ಮಂಗಳೂರು ಇದರ ಮಾಸಿಕ ಸಭೆಯಲ್ಲಿ ಕನ್ನಡ ಸಾರಸ್ವತ ಲೋಕದ ಉದಯೋನ್ಮುಖ ಯುವಪ್ರತಿಭೆಯಾಗಿ ರಾಜ್ಯ ಅಂತರ್ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹಾಗೂ ಜಿನ ಭಜನೆಗಳ ರಚನೆಗಾರನಾಗಿರುವ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಹೊಸಂಗಡಿ ಬಸದಿ ಸಮ್ಯಕ್ತ್ ಎಚ್. ಜೈನ್ ಅವರನ್ನು ಜೈನ ಧರ್ಮದ ಹೆಮ್ಮೆಯ ಬಾಲ ಪ್ರತಿಭೆ ಎಂದು ಗೌರವಿಸಿ ಸನ್ಮಾನಿಸಲಾಯಿತು.

 

ಸಭೆಯು ಕುಪ್ಪೆಪದವು ಪದ್ಮಪ್ರಸಾದ್ ಅವರ ಪ್ರಾಯೋಜಕತ್ವದಲ್ಲಿ ನಡೆಯಿತು. ಈ ಸಂಧರ್ಭದಲ್ಲಿ ಭಾರತೀಯ ಜೈನ್ ಮಿಲನ್ ನಿರ್ದೇಶಕರಾದ ಸುದರ್ಶನ್ ಜೈನ್, ಕುಪ್ಪೆಪದವು ಜೈನ್ ಮಿಲನ್ ಅಧ್ಯಕ್ಷರಾದ ಭೋಜರಾಜ್ ಜೈನ್ , ಕಾರ್ಯದರ್ಶಿ ಪದ್ಮಪ್ರಸಾದ್ ಜೈನ್, ಪದಾಧಿಕಾರಿಗಳು ಉಪಸ್ಥಿತರಿದ್ದರು .

Also Read  ಪಡುಕೋಣೆ ಶ್ರೀ ರಾಮ ದೇವಸ್ಥಾನದಲ್ಲಿ ಕಳ್ಳತನ ➤ 1.5 ಲಕ್ಷ ಮೌಲ್ಯದ ಪ್ರಭಾವಳಿ ಕಳವು

 

error: Content is protected !!
Scroll to Top