ಕಡಬ ತಾಲೂಕು ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ➤ ಅಧ್ಯಕ್ಷರಾಗಿ ನಾಗರಾಜ್ ಎನ್.ಕೆ., ಕಾರ್ಯದರ್ಶಿಯಾಗಿ ವಿಜಯ್ ಕುಮಾರ್ ಪೆರ್ಲ

(ನ್ಯೂಸ್ ಕಡಬ) newskadaba.com ಕಡಬ, ಡಿ.05. ಕಡಬ ತಾಲೂಕು ಪತ್ರಕರ್ತರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಕಛೇರಿಯಲ್ಲಿ ಶನಿವಾರದಂದು ನಡೆಯಿತು.

ನೂತನ ಅಧ್ಯಕ್ಷರಾಗಿ ಕಡಬದ ಉದಯವಾಣಿ ವರದಿಗಾರ ನಾಗರಾಜ್ ಎನ್.ಕೆ. ಅವಿರೋಧವಾಗಿ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಸುದ್ದಿ ಬಿಡುಗಡೆ ಪತ್ರಿಕೆಯ ಕಡಬ ವರದಿಗಾರ ವಿಜಯ ಕುಮಾರ್ ಪೆರ್ಲ, ಉಪಾಧ್ಯಕ್ಷರಾಗಿ ಸುಧಾಕರ ಆಚಾರ್ಯ ಕಾಣಿಯೂರು, ಜೊತೆ ಕಾರ್ಯದರ್ಶಿಯಾಗಿ ವಿಜಯವಾಣಿ ಪತ್ರಿಕೆಯ ಕಡಬದ ವರದಿಗಾರ ಪ್ರವೀಣ್ ರಾಜ್ ಕೊಯಿಲ, ಕೋಶಾಧಿಕಾರಿಯಾಗಿ ವಾರ್ತಾಭಾರತಿಯ ತಸ್ಲೀಂ ಮರ್ಧಾಳ ಅವರನ್ನು ಆಯ್ಕೆ ಮಾಡಲಾಯಿತು.

Also Read  ರೈತ ಸಮುದಾಯಕ್ಕೆ ಗುಡ್ ನ್ಯೂಸ್        ➤ ರಾಜ್ಯಾದ್ಯಂತ 2.6 ಲಕ್ಷ ನೀರಾವರಿ ಪಂಪ್ ಸೆಟ್ ಗಳಿಗೆ ಸೌರಶಕ್ತಿ

error: Content is protected !!
Scroll to Top