ಸೋಲಾರ್ ಶಕ್ತಿಯಿಂದ ಮನೆಬಳಕೆಯ ನೀರಿನ ಪಂಪ್ ಚಾಲನೆ ➤ ನೂಜಿಬಾಳ್ತಿಲದ ಯುವಕನ ಸಾಧನೆ 

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ ಡಿ. 05: ಬೇಸಿಗೆ ಕಾಲ ಬಂತೆಂದರೆ ದಿನಂಪ್ರತಿ ವಿದ್ಯುತ್ ಕಡಿತಗೊಂಡು ವಿವಿಧ ರೀತಿಯಲ್ಲಿ ತೊಂದರೆಗಳನ್ನು ಅನುಭವಿಸುತ್ತಿರುವ ಗ್ರಾಮೀಣ ಭಾಗದವರು, ಸಂಕಷ್ಟಪಡುತ್ತಿರುತ್ತಾರೆ. ಆದರೆ ಯುವಕನೊಬ್ಬ ಕಡಿಮೆ ವೆಚ್ಚದಲ್ಲಿ ಸೌರಶಕ್ತಿ ಬಳಸಿ ಮನೆಬಳಕೆಗೆ ಕೆರೆ, ಬಾವಿಯಿಂದ ನೀರೆತ್ತುವ ಪಂಪ್ ಚಾಲನೆಗೊಳ್ಳುವ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ.

ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಮಲ್ಯೋಡಿ ನಿವೃತ್ತ ಪೋಸ್ಟ್‍ಮೆನ್ ತೋಮಸ್ ಕೆ.ಟಿ. ಹಾಗೂ ಸೋಸಮ್ಮ ದಂಪತಿಗಳ ಪುತ್ರ ಅಂಡ್ರೋಸ್ ಪಿ.ಟಿ. ಎಂಬವರು ಮನೆ ಬಳಕೆಗೆ ಕಡಿಮೆ ವೆಚ್ಚದಲ್ಲಿ ಸೋಲಾರ್ ಶಕ್ತಿಯಿಂದ ಚಾಲುಗೊಳ್ಳುವ ನೀರೆತ್ತುವ ಪಂಪ್‍ನ್ನು ವ್ಯವಸ್ಥಿತ ಪ್ರಯೋಗದ ಮೂಲಕ ನೀರು ಹಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂಡ್ರೋಸ್ ಅವರು ವಿದೇಶದಲ್ಲಿ ಸೋಲಾರ್ ಕಂಪೆನಿಯ ಟೆಕ್ನಿಷಿಯನ್ ಆಗಿ ಉದ್ಯೋಗದಲ್ಲಿದ್ದು, ಕೊರೊನಾ ಕಾರಣದಿಂದ ಉದ್ಯೋಗ ಬಿಟ್ಟು, ಮರಳಿ ತನ್ನೂರು ನೂಜಿಬಾಳ್ತಿಲವನ್ನು ಸೇರಿದ್ದರು.

 

 

ಗ್ರಾಮೀಣ ಭಾಗದಲ್ಲಿ ನಿತ್ಯ ಕಾಡುತ್ತಿರುವ ವಿದ್ಯುತ್ ಸಮಸ್ಯೆಯಿಂದ ಮನೆ ಕೆಲಸಗಳಿಗೆ ಆಗುತ್ತಿರುವ ತೊಂದರೆಗಳಿಗೆ ಪರಿಹಾರ ಎಂಬಂತೆ ಇವರು ಇದನ್ನು ಕಂಡುಕೊಂಡಿದ್ದಾರೆ. 12 ವೋಲ್ಟ್ ಡೀಸಿ ಮೋಟಾರ್ ಬಳಸಿ ಬಲ್ಕ್ ಬೂಸ್ಟರ್ ವೋಲ್ಟೇಜ್ ಕಂಟ್ರೋಲರ್ ಸಹಾಯದಿಂದ 50ವ್ಯಾಟ್ ಸೋಲಾರ್ ಪೆನಲ್ ಬಳಸಿಕೊಳ್ಳಲಾಗಿದೆ. ಈ ಪಂಪನ್ನು ಬಾವಿಗೆ ಅಥವಾ ಕೆರೆಗೆ ಇಳಿಸಲಾಗುತ್ತದೆ. ಪಂಪ್ ನೀರಿನಲ್ಲಿ ಮುಳುಗದಂತೆ ಪಿವಿಸಿ ಪೈಪ್ ಬಳಸಿಕೊಳ್ಳಲಾಗುತ್ತದೆ. ಪಂಪ್‍ಗೆ ಡ್ರಿಪ್ ಪೈಪ್ ಬಳಸಿಕೊಂಡು ನೀರನ್ನು ಹೊರತೆಗೆಯಲಾಗುತ್ತದೆ. ಸೂರ್ಯನ ಶಕ್ತಿಯಿಂದಲೇ ಪಂಪ್ ಚಾಲನೆಗೊಳ್ಳುತ್ತಿದ್ದು, ಪಂಪ್ ಆನ್, ಆಫ್ ಮಾಡಲು ಸ್ವಿಚ್ ಅಳವಡಿಸಲಾಗಿದೆ. ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಪಂಪ್ ನಿರಂತರ ಚಾಲನೆಗೊಳ್ಳುತ್ತದೆ.

Also Read  ಇಂದು ಉಸ್ತುವಾರಿ ಸಚಿವರ ದ.ಕ ಜಿಲ್ಲಾ ಪ್ರವಾಸ

 

Xl

ಈ ಪಂಪ್ ಸಹಾಯದಿಂದ ಗಂಟೆಗೆ ಸುಮಾರು 180 ಲೀಟರ್ ನೀರು ಮೇಲೆತ್ತಬಹುದು. ಎತ್ತರದ ಪ್ರದೇಶಗಳಾದ ಮನೆ ಮೇಲಿನ ಟ್ಯಾಂಕ್, ಗುಡ್ಡದ ಮೇಲೆ ಇರುವ ಟ್ಯಾಂಕ್‍ಗಳಿಗೆ ನೀರು ಹಾಯಿಸುವಲ್ಲಿ ಇವರು ಯಶಸ್ವಿಯಾಗಿದ್ದಾರೆ. ಪಂಪ್‍ನ ಗುಣಮಟ್ಟ ಕಾಯಲು ನಿರಂತರ ಐದು ಗಂಟೆ ಚಾಲುಗೊಂಡಲ್ಲಿ ಒಮ್ಮೆ ನಿಲ್ಲಿಸಿ, ಬಳಿಕ ಚಾಲನೆ ಮಾಡಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ.
ನೀರು ಪೋಲಾಗಲ್ಲ; ಈ ತಂತ್ರ ಅಳವಡಿಸುವ ಸಂದರ್ಭದಲ್ಲಿ ಅಲ್ಪ ವೆಚ್ಚವಾಗುತ್ತದೆ. ಬಳಿಕ ಹಗಲಿನಲ್ಲಿ ನಿರಂತರ ಪಂಪ್ ಚಾಲನೆ ಮಾಡಿ ನೀರು ಹಾಯಿಸುವಂತೆ ಮಾಡಬಹುದು. ಇದು ಹನಿ ನೀರಾವರಿ ಮಾದರಿಯಲ್ಲಿದ್ದು, ಡ್ರಿಪ್ ಪೈಪ್ ಬಳಸಿಕೊಳ್ಳಲಾಗುತ್ತದೆ. ಟ್ಯಾಂಕ್‍ಗೆ ನೀರು ತುಂಬಿಸಲು, ಹೂತೋಟಗಳಿಗೆ, ಸಣ್ಣಪ್ರಮಾಣದ ತರಕಾರಿ ತೋಟಗಳಿಗೆ, ಕೃಷಿಗೆ ನೀರು ಹಾಯಿಸಲು ಇದು ಸಹಕಾರಿಯಾಗಲಿದ್ದು, ಇಲ್ಲಿ ನೀರು ಪೋಲಾಗುವ ಸಂಭವಗಳಿಲ್ಲ ಎನ್ನುತ್ತಾರೆ ಅಂಡ್ರೋಸ್.

Also Read  ಆಲಂಕಾರು: ಕುಡಿಯುವ ನೀರಿನ ವ್ಯವಸ್ಥೆ ಹಳ್ಳ ಹಿಡಿಯುತ್ತಿದೆ

ಅಂಡ್ರೋಸ್ ಅವರು ನೂಜಿಬಾಳ್ತಿಲ ಭಾಗದಲ್ಲಿ ಅನೇಕ ಕಡೆ ಇದನ್ನು ಅಳವಡಿಸಿದ್ದಾರೆ. ಗುಡ್ಡಗಾಡು ಭಾಗದಲ್ಲಿಯೂ ಇವರ ಪ್ರಯೋಗ ಯಶಸ್ವಿಗೊಂಡಿದೆ. ಇನ್ನೂ ಬೇಡಿಕೆಗಳು ಬರುತ್ತಿವೆ. ಒಟ್ಟಾರೆ ವಿದ್ಯುತ್ ಖರ್ಚಿಲ್ಲದೆ ತುಂತುರು ನೀರಾವರಿ ಮಾದರಿಯಲ್ಲಿ ನೀರಿನ ಬಳಕೆ ಇಲ್ಲಿ ಸಾಧ್ಯವಾಗಿದೆ. ಸೌಶಕ್ತಿ ಬಳಸಿ ಮನೆ ಬಳಕೆಗೆ ನೀರು ಮೇಲೆತ್ತುವಲ್ಲಿ 12 ವ್ಯಾಟ್‍ನ ಡಿಸಿ ಮೋಟಾರ್ ಬಳಸಿಕೊಳ್ಳಲಾಗಿದೆ. ಇದನ್ನು ಅಳವಡಿಸಲು ನೂಜಿಬಾಳ್ತಿಲ ವ್ಯಾಪ್ತಿಯಲ್ಲಿ 6500 ರೂ. ವೆಚ್ಚ ತಗುಲುತ್ತದೆ. ಇದು ಗಂಟೆಗೆ 180 ಲೀಟರ್ ನೀರು ಮೇಲೆತ್ತುವ ಸಾಮಥ್ರ್ಯ ಹೊಂದಿದೆ. ಈ ಭಾಗದಲ್ಲಿ ಈಗಾಗಲೇ ಅಳವಡಿಸಿದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತಗೊಂಡಿದ್ದು, ಇನ್ನೂ ಬೇಡಿಕೆಗಳು ಬರುತ್ತಿವೆ.

error: Content is protected !!
Scroll to Top