ತುಳುನಾಡ ತುಡರ್ ಯುವಕ ಮಂಡಲದ ಅಧ್ಯಕ್ಷರಾಗಿ ತಿರುಮಲೇಶ್ವರ ಸಾಕೋಟೆ ಆಯ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರುಡಿ. 05: ಕಡಬ ತಾಲೂಕಿನ ನೂಜಿಬಾಳ್ತಿಲ ಹಾಗೂ ರೆಂಜಿಲಾಡಿ ಗ್ರಾಮ ವ್ಯಾಪ್ತಿಯ ಯುವಕರು ಸೇರಿ ನೂತನವಾಗಿ ರಚಿಸಿರುವ ತುಳುನಾಡ ತುಡರ್ ಯುವಕ ಮಂಡಲದ ಅಧ್ಯಕ್ಷರಾಗಿ ತಿರುಮಲೇಶ್ವರ ಸಾಕೋಟೆ ಅವರು ಆಯ್ಕೆಯಾಗಿದ್ದಾರೆ. ಗೌರವ ಸಲಹೆಗಾರರಾಗಿ ಮೃತ್ಯುಂಜಯ ಬೀಡೆ ಕೆರೆತೋಟ, ಉಮೇಶ್ ಶೆಟ್ಟಿ ಸಾಯಿರಾಮ್ ಅವರನ್ನು ಆಯ್ಕೆ ಮಾಡಲಾಗಿದೆ. ಸಂಚಾಲಕರಾಗಿ ಯಶೋಧರ ಪೂಜಾರಿ ಜಾಲು, ಉಪಾಧ್ಯಕ್ಷರಾಗಿ ಪ್ರದೀಶ್ ಪಟ್ಟೆತಮಜಲು, ಕಾರ್ಯದರ್ಶಿಯಾಗಿ ದಯಾನಂದ ಕೆ., ಜತೆ ಕಾರ್ಯದರ್ಶಿಯಾಗಿ ಉಮೇಶ್ ಕಲ್ನಾರ್, ಕೋಶಾಧಿಕಾರಿಯಾಗಿ ಮಿಥುನ್ ಕಲ್ನಾರ್ ಆಯ್ಕೆಗೊಂಡಿರುತ್ತಾರೆ.

Also Read  ಮದುವೆ ವೇದಿಕೆಯಲ್ಲಿ ಹೃದಯಾಘಾತದಿಂದ ವ್ಯಕ್ತಿ ಮೃತ್ಯು.!

ನೂತನ ತುಳುನಾಡ ತುಡರ್ ಯುವಕ ಮಂಡಲದ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ರೆಂಜಿಲಾಡಿ ಗ್ರಾಮದ ನೂಜಿಬೈಲ್ ನೂಜಿಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ ಸಭಾಂಗಣದಲ್ಲಿ ಡಿ.6ರಂದು ನಡೆಯಲಿದೆ. ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

error: Content is protected !!
Scroll to Top