ಮಂಗಳೂರು :ಟೋಟಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಗ್ಯಾಸ್ ಘಟಕದಲ್ಲಿ ಅಣುಕು ಕಾರ್ಯಾಚರಣೆ 

(ನ್ಯೂಸ್ ಕಡಬ) newskadaba.com ಮಂಗಳೂರುಡಿ. 05: ನಗರದ ಹೊರವಲಯದ ಟೋಟಲ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಮೆರಿನ್ ಟೈಮ್ ಟರ್ಮಿನಲ್ ಎಲ್.ಪಿ.ಜಿ. ಗ್ಯಾಸ್ ಘಟಕದಲ್ಲಿ ತುರ್ತು ಅಣುಕು ಕಾರ್ಯಾಚರಣೆಯನ್ನು ನಡೆಸಲಾಯಿತು. ಅಣುಕು ಕಾರ್ಯಚರಣೆಯು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಕಾರ್ಖಾನೆಗಳ ಉಪನಿರ್ದೇಶಕರಾಜೇಶ್ ಸಿ ಮಿಶ್ರಕೋಟಿ, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ವಿಜಯಕುಮಾರ್ ಪೂಜಾರ್, ಅಗ್ನಿಶಾಮಕ ಅಧಿಕಾರಿ ಮೊಹಮ್ಮದ್ಜುಲ್ಫಿಕರ್ ನವಾಜ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಅಗ್ನಿಶಾಮಕಅಧಿಕಾರಿ ಸೇರಿದಂತೆ ಜಿಲ್ಲಾಡಳಿತದ ವಿವಿಧ ವಿಭಾಗಗಳ ಅಧಿಕಾರಿಗಳು ಮತ್ತು ಸರ್ಕಾರಿ ಸಂಸ್ಥೆಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಯಿತು.

ಗ್ಯಾಸ್ ತುಂಬುವಘಟಕದಲ್ಲಿ ಬುಲೆಟ್‍ಟ್ಯಾಂಕರ್ ಲಾರಿಗಳಿಗೆ ಎಲ್.ಪಿ.ಜಿ. ಸಿಲಿಂಡರ್ ಅನ್ನು ತುಂಬುವಾಗ ಅದರ ಸೋರಿಕೆ ಉಂಟಾಯಿತು, ಕ್ಷಣಾರ್ಧದಲ್ಲಿ ಅಲ್ಲಿನ ಸ್ಲಿಂಕರ್‍ಗಳಿಂದ ನೀರು ಚಿಮ್ಮ ತೊಡಗಿತು ಜೊತೆಯಲ್ಲಿ ಸೈರನ್ ಮೊಳಗಿತು. ಅಲ್ಲಿನ ಸುರಕ್ಷತಾ ಸಿಬ್ಬಂದಿ ವರ್ಗದವರು ಸುರಕ್ಷತಾ ಸಾಧನಗಳನ್ನು ಬಳಸಿಕೊಂಡು ಪೈಪ್‍ಲೈನ್‍ಗಳ ಮೂಲಕ ಹೆಚ್ಚಿನ ನೀರನ್ನು ಸಿಂಪಡಿಸಲು ಕಾರ್ಯಪ್ರವೃತ್ತರಾದರು.
ಗ್ಯಾಸ್ ಅನಿಲ ಸೇವನೆಯಿಂದ ಅಲ್ಪ ಪ್ರಮಾಣದಲ್ಲಿ ಅಸ್ವಸ್ಥನಾದ ಸಿಬ್ಬಂದಿಯನ್ನು ಸುರಕ್ಷಿತಾ ಸ್ಥಳಕ್ಕೆ ಕರೆತರಲಾಯಿತು. ಕೆಲವೇ ಕ್ಷಣಗಳಲ್ಲಿ ವೈದ್ಯಕೀಯ ತಂಡ ಅವರಿಗೆ ಸೂಕ್ತ ಪ್ರಥಮ ಚಿಕಿತ್ಸೆ ನೀಡಿದರು. 8 ರಿಂದ 9 ನಿಮಿಷದೊಳಗಡೆ ಕರ್ನಾಟಕ ಅಗ್ನಿಶಾಮಕ ದಳದ ವಾಹನ ಹಾಗೂ ಬಂದರು ಇಲಾಖೆಯ ಅಗ್ನಿಶಾಮಕ ವಾಹನಗಳು ತಮ್ಮ ಕಾರ್ಯಚರಣೆಗಳನ್ನು ಕೈಗೊಂಡು ಪರಿಸ್ಥಿತಿಯನ್ನು ನಿಭಾಯಿಸಿದವು.

Also Read  ಕಡಬ: ಗೌಡ ಸಮುದಾಯದ ಜನಸಂಖ್ಯಾ ಸಮೀಕ್ಷೆ, ದೇಣಿಗೆ ಸಂಗ್ರಹಕ್ಕೆ ಚಾಲನೆ

ಜಿಲ್ಲಾಧಿಕಾರಿ ಸಂಪೂರ್ಣ ಚಟುವಟಿಕೆಗಳನ್ನು ವೀಕ್ಷಿಸಿದರು, ಹಾಗೂ ಎಲ್.ಪಿ.ಜಿ. ಘಟಕದ ಸಾಮಾಥ್ರ್ಯ ಸೇರಿದಂತೆ ಮತ್ತಿತರ ಸುರಕ್ಷತಾ ಅಂಶಗಳ ಬಗ್ಗೆ ಚರ್ಚಿಸಿ ಗ್ಯಾಸ್‍ಪ್ಲಿಂಗ್ ಘಟಕದಲ್ಲಿ ವಿಪತ್ತುತಗ್ಗಿಸುವಿಕೆ ಮತ್ತು ಸುರಕ್ಷತಾ ನಿರ್ವಹಣೆ ಬಗ್ಗೆ ವಿವಿಧತಾಂತ್ರಿಕ ವಿವರಗಳನ್ನು ಹಾಗೂ ಕಾನೂನಾತ್ಮಕ ನಿಬಂಧನೆಗಳನ್ನು ಚರ್ಚಿಸಿದರು. ಎಲ್.ಪಿ.ಜಿ. ಗ್ಯಾಸ್ ಬುಲೆಟ್ ಟ್ಯಾಂಕರ್‍ಗಳಲ್ಲಿ ಸಾಗಿಸುವಾಗ ಆಗುವ ಅನಾಹುತಗಳು ಹಾಗೂ ಸುರಕ್ಷತಾಕ್ರಮ ತೆಗೆದುಕೊಳ್ಳುವ ಬಗ್ಗೆ ಸಹ ಚರ್ಚಿಸಿದರು. ಅದರೊಂದಿಗೆ ಮಾಹಿತಿಗಳನ್ನು ಪಡೆದು ಮಾತನಾಡಿ, ಈ ರೀತಿಯಅಣುಕು ಪ್ರದರ್ಶನಗಳನ್ನು ಆಗ್ಗಿಂದಾಗ್ಗೆ ಮಾಡಿದಾಗಅಭ್ಯಾಸವಾಗುತ್ತದೆ. ನಿಜವಾಗಿಯೂ ವಿಪತ್ತು ಉಂಟಾದರೆ ಯಾವುದೇ ಗೊಂದಲಗಳು ಇಲ್ಲದೇ ಕಡಿಮೆ ಸಮಯದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಿ ನಿಯಂತ್ರಿಸಲು ಅನುಕೂಲವಾಗುತ್ತದೆ ಎಂದರು.

ಕಾರ್ಖಾನೆಯ ಉಪನಿರ್ದೇಶಕ ರಾರ್ಜೆಶ್ ಪಿ ಮಾತನಾಡಿ, ಡಿಸೆಂಬರ್ ಮಾಹೆಯನ್ನು ರಾಸಾಯನಿಕ ದುರಂತ ನಿವಾರಣಾ ಮಾಹೆಯನ್ನಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಎಲ್ಲಾ ಭಾಗಿದಾದದರಿಗೆ ಅರಿವು ಮೂಡಿಸುವುದ ಹಾಗೂ ತರಬೇತಿ ನೀಡುವ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುವುದು ಎಂದ ಅವರು, ಮಾರ್ಕ್‍ಡ್ರಿಲ್ ಸಂದರ್ಭದಲ್ಲಿ ಕೈಗೊಳ್ಳುವ ಅಗತ್ಯ ಮುಂಜಾಗೃತ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತಾ ವಿಜಯ್ ಕುಮಾರ್ ಮಾತನಾಡಿ, ಮಾರ್ಕ್ ಡ್ರಿಲ್ ಗಳನ್ನು ಆಯೋಜಿಸುವುದರಿಂದ ಸಿಬ್ಬಂದಿ ವರ್ಗದವರು ತಮ್ಮ ಕಾರ್ಯನಿರ್ವಹಣೆ ಕೈಗೊಳ್ಳಲು ಸರಳವಾಗುತ್ತದೆ ಎಂದರು. ನೆರೆಹೊರೆಯ ಕೈಗಾರಿಕೆಗಳಾದ ಐಒಸಿಎಲ್, ಎಚ್‍ಪಿಸಿಎಲ್, ಬಿಪಿಸಿಎಲ್, ಒಎಂಪಿಎಲ್, ಬಿಎಎಸ್‍ಎಫ್ ಬಾಹ್ಯ ವೀಕ್ಷಕರು ತಮ್ಮ ಅಭಿಪ್ರಾಯ ಮಂಡಿಸಿದರು.

error: Content is protected !!
Scroll to Top