ಮಂಗಳೂರು:ಉಗ್ರರ ಪರ ಗೋಡೆ ಬರಹ ಪ್ರಕರಣ ➤ ಮತ್ತಿಬ್ಬರು ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರುಡಿ. 05: ನಗರದಲ್ಲಿ ಕಂಡು ಬಂದ ಪ್ರಚೋದನಕಾರಿ ಗೋಡೆ ಬರಹ ಹಿನ್ನೆಲೆಯಲ್ಲಿ ನಗರ ಪೊಲೀಸರು ಶುಕ್ರವಾರ ಮತ್ತೆ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ.

 

ಬಿಜೈ ಮತ್ತು ಜಿಲ್ಲಾ ಕೋರ್ಟ್ ಸಮೀಪ ಪ್ರಚೋ ದನಕಾರಿ ಗೋಡೆ ಬರಹದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ದ.ಕ. ಜಿಲ್ಲಾ ಪೊಲೀಸ್ ಇಲಾಖೆ ಉಪವಿಭಾಗ ಎಸಿಪಿ ಜಗದೀಶ್ ನೇತೃತ್ವದಲ್ಲಿ, ಕದ್ರಿ ಪೊಲೀಸ್ ಇನ್ ಸ್ಪೆಕ್ಟರ್ ಸವಿತ್ರ ತೇಜ, ಸಿಸಿಬಿ ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್, ಬಂದರು ಠಾಣೆಯ ಇನ್ ಸ್ಪೆಕ್ಟರ್ ಗೋವಿಂದರಾಜ್ ನೇತೃತ್ವದ ತಂಡ ರಚಿಸಿ ತನಿಖೆಗೆ ವಹಿಸಲಾಗಿದೆ. ಶುಕ್ರವಾರ ಇಬ್ಬರನ್ನು ವಶಕ್ಕೆ ಪಡೆಯುವ ಮೂಲಕ ಪ್ರಚೋದನಕಾರಿ ಗೋಡೆ ಬರಹ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಮೂವರನ್ನು ಪೊಲೀಸ್ ಇಲಾಖೆ ವಶಕ್ಕೆ ಪಡೆದಂತಾಗಿದೆ.ಈ ಮೂವರನ್ನೂ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿದೆ.

Also Read  ಕೋವಿಡ್ ಲಸಿಕೆ ತೆಗೆದುಕೊಂಡಿದ್ದ ಸಚಿವ ಅನಿಲ್ ವಿಜ್ ಗೆ ಕೊರೋನಾ.!

error: Content is protected !!
Scroll to Top