ಉಪ್ಪಿನಂಗಡಿ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಮಹಮ್ಮದ್ ಓಟೆಚ್ಚಾರು ಆಯ್ಕೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ. 04: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಮುಳುಗುತಜ್ಞರಾಗಿ ನದಿ ನೀರಿನಲ್ಲಿ ಅಪಾಯದಲ್ಲಿ ಸಿಲುಕಿದ ಜೀವಗಳನ್ನು ರಕ್ಷಣೆ ಮಾಡಿರುವ ಬಂದಾರು ಗ್ರಾಮದ ವಿ. ಮಹಮ್ಮದ್ ಓಟೆಚ್ಚಾರು ಅವರನ್ನು ಈ ವರ್ಷದ ರಾಜ್ಯ ಮಟ್ಟದ ಗೌರವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

 

 

ಅತ್ಯುತ್ತಮ ಈಜುಪಟುವಾಗಿರುವ ಮಹಮ್ಮದ್ ಓಟೆಚ್ಚಾರು ರವರು ಡಿ.10 ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯದ ಉಪಮುಖ್ಯಮಂತ್ರಿಯವರು ಸನ್ಮಾನಿಸಿ ಗೌರವಿಸಲಿದ್ದಾರೆ. ಇವರು ನದಿ ನೀರಿನಲ್ಲಿ ಅಪಾಯದಲ್ಲಿ ಸಿಲುಕಿದವರ ರಕ್ಷಣೆ, ಆಳವಾದ ನದಿಯ ಗಯ, ಕೆರೆಗಳಲ್ಲಿ ಮೃತಪಟ್ಟವರ ಮೃತದೇಹವನ್ನು ಮೇಲಕ್ಕೆತ್ತಿ ಪೊಲೀಸ್ ಹಾಗೂ ಅಗ್ನಿಶಾಮಕ ಇಲಾಖೆಗೆ ಸಹಕಾರಿಯಾಗಿದ್ದಾರೆ. ಕಲ್ಲಿಕೋಟೆಯ ನೋಲೇಜ್ ಸಿಟಿಯಲ್ಲಿ ಅವರು ‘ಜೀವ ರಕ್ಷಕ’ ಎಂಬ ಬಿರುದನ್ನು ಕೂಡ ಪಡೆದಿದ್ದಾರೆ. ಅಲ್ಲದೇ ಹಲವು ಸಂಘ ಸಂಸ್ಥೆಗಳು ಸನ್ಮಾನ ಪುಸಸ್ಕಾರಕ್ಕೆ ಅವರು ಭಾಜನರಾಗಿದ್ದಾರೆ.

Also Read  ಅಪಘಾತ ತಡೆಯಲು ರಾಜ್ಯ ಸರ್ಕಾರದ ಚಿಂತನೆ ► 100 ಸಿಸಿ ವಾಹನಗಳಲ್ಲಿ ಹಿಂಬದಿಯಲ್ಲಿ ಸವಾರಿ ಮಾಡುವಂತಿಲ್ಲ..!!!

 

 

error: Content is protected !!
Scroll to Top