ಕಾಸರಗೋಡು: ಆಕಸ್ಮಿಕವಾಗಿ ಅಶ್ರುವಾಯು (ಗ್ರನೇಡ್) ಸ್ಪೋಟ…!

(ನ್ಯೂಸ್ ಕಡಬ) newskadaba.com ಕಾಸರಗೋಡು, ಡಿ. 04: ಕಾಸರಗೋಡು ಸಶಸ್ತ್ರ ಮೀಸಲು ಪಡೆಯ ಮೈದಾನದಲ್ಲಿ ಆಕಸ್ಮಿಕವಾಗಿ ಗ್ರನೇಡ್ (ಅಶ್ರುವಾಯು) ಸ್ಪೋಟಗೊಂಡು ಇಬ್ಬರು ಪೊಲೀಸರು ಗಾಯಗೊಂಡ ಘಟನೆ ಇಂದು ನಡೆದಿದೆ. ಗಾಯಗೊಂಡ ವ್ಯಕ್ತಿಗಳನ್ನು ಸುಧಾಕರ ಹಾಗೂ ಪವಿತ್ರ ಎಂದು ಗುರುತಿಸಲಾಗಿದೆ.

 

 

ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ ಹಿನ್ನಲೆಯಲ್ಲಿ ತರಭೇತಿ ನಡೆಯುತ್ತಿದ್ದಾಗ ಆಕಸ್ಮಿಕವಾಗಿ ಗ್ರನೇಡ್ ಸ್ಪೋಟಿಸಿ ಈ ಅವಘಡ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಗಳನ್ನು ಕಾಸರಗೋಡಿನ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಸುಧಾಕರ ಅವರ ತಲೆಗೆ ತೀವ್ರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಕೋಝಿಕ್ಕೋಡ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ನಮ್ಮ ರಾಜ್ಯಕ್ಕೆ ಪ್ರವೇಶಿಸಿದ ಡೆಡ್ಲಿ ಗೇಮ್ ► ಕೈ ಕುಯ್ದುಕೊಂಡ 11 ರ ಪೋರಿ

 

 

error: Content is protected !!
Scroll to Top