ವಿಟ್ಲದಲ್ಲಿ ಪರಿಚಯಸ್ಥನಿಂದಲೇ ನಡೆಯಿತು ಹಲ್ಲೆ ➤ ಆರೋಪಿ ಜಯ ಕೊಟ್ಟಾರಿ ವಿರುದ್ಧ ಕೇಸ್

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.04: ಮುಖಂಡನೊಬ್ಬ ವ್ಯಕ್ತಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ವಿಟ್ಲ ಕಲಾಶೀಪಾಳ್ಯದಲ್ಲಿ ವರದಿಯಾಗಿದೆ.ವಿಟ್ಲ ಪಡ್ನೂರು ಗ್ರಾಮದ ಕಡಂಬು ಸುರಂಗದಮೂಲೆ ನಿವಾಸಿ ಚಿದಾನಂದ ಹಲ್ಲೆಗೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

 

ಇನ್ನು ದಾಳಿಗೊಳಗಾದ ವ್ಯಕ್ತಿ ಚಿದಾನಂದ ಹಾಗೂ ಹಲ್ಲೆ ನಡೆಸಿರುವ ಜಯಕೊಟ್ಟಾರಿ ಒಬ್ಬರಿಗೊಬ್ಬರು ಪರಿಚಯಸ್ಥರಾಗಿದ್ದು, ಕಳೆದ ದಿನ ಚಿದಾನಂದ ಎಂಬುವರು ಸಂಜೆ ಮನೆಗೆ ತೆರಳುತ್ತಿದ್ದಾಗ ಏಕಾಏಕಿಯಾಗಿ ಬಂದ ಜಯಕೊಟ್ಟಾರಿ ಅವಾಚ್ಯ ಶಬ್ದಗಳಿಂದ ನಿಂಧಿಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಗಾಯಗೊಂಡ ಚಿದಾನಂದ ಅವರನ್ನು ವಿಟ್ಲದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಆರೋಪಿ ಜಯ ಕೊಟ್ಟಾರಿ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ರಸ್ತೆ ಅಪಘಾತ- ಒಂದೇ ಕುಟುಂಬದ ಮೂವರು ಮೃತ್ಯು..!

error: Content is protected !!
Scroll to Top