ಕಡಬ: ಮುಖ್ಯ ಪೇಟೆಯಲ್ಲಿ ಡಿ.07 ರಂದು “ಮಹಾನಾಯಕ ಡಾ.ಬಿ.ಆರ್‌.ಅಂಬೇಡ್ಕರ್” ಧಾರಾವಾಹಿಯ ಫ್ಲೆಕ್ಸ್ ಅನಾವರಣ

(ನ್ಯೂಸ್ ಕಡಬ) newskadaba.com ಕಡಬ, ಡಿ.04: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಜೀವನಾಧರಿತ ಮಹಾನಾಯಕ ಧಾರಾವಾಹಿಗೆ ನಾಡಿನೆಲ್ಲೆಡೆ ಅಭೂತಪೂರ್ವ ಜನಬೆಂಬಲ ಸಿಗುತ್ತಿದೆ ಜತೆಗೆ ಯಶಸ್ವಿಯನ್ನು ಕಂಡಿದೆ.ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಮಹಾನಾಯಕ ಧಾರಾವಾಹಿಯನ್ನು ಮೆಚ್ಚಿಕೊಂಡಿದ್ದಾರೆ. ಈ ಒಂದು ಯಶಸ್ವಿನ ಹಿನ್ನಲೆಯಲ್ಲಿ ಕಡಬದ ಮುಖ್ಯ ಪೇಟೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ರವರ ಕುರಿತಾದ ಧಾರವಾಹಿಯ ಫ್ಲೆಕ್ಸ್  ಉಮೇಶ್ ಕೋಡಿಂಬಾಳ ಇವರ ಅಧ್ಯಕ್ಷತೆಯಲ್ಲಿ ಅನಾವರಣಗೊಳ್ಳಲಿದೆ.

ಕರ್ನಾಟಕ ಸಂಘರ್ಷ ಸಮಿತಿ ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ (ರಿ)47/74-75 ಕಡಬ ತಾಲೂಕು ಶಾಖೆ ವತಿಯಿಂದ ಚಿತ್ರರಂಗದ ಇತಿಹಾಸದಲ್ಲಿ TRP ಸ್ಥಾನದಲ್ಲಿ ನಂಬರ್ ಒನ್ ದಾಖಲೆ ಬರೆದಿರುವ ಕನ್ನಡದ ಝೀ ಟಿವಿ ಚಾನಲ್ ನಲ್ಲಿ ಪ್ರಸಾರಗೊಳ್ಳುತ್ತಿರುವ ಮೇಘ ಧಾರಾವಾಹಿ ಮಹಾನಾಯಕ ಸಂವಿಧಾನ ಶಿಲ್ಪಿ, ಡಾ.ಬಿ.ಆರ್‌.ಅಂಬೇಡ್ಕರ್‌ ಎಂಬ ಧಾರಾವಾಹಿಯ ಫ್ಲೆಕ್ಸ್ ಅನಾವರಣ ಹಾಗೂ ಬಾಬಾ ಸಾಹೇಬ್ ರ 64ನೇ ಪುಣ್ಯ ಸ್ಮರಣೆ, ಕಾರ್ಯಕ್ರಮವು ಉಮೇಶ್ ಕೋಡಿಂಬಾಳ ಇವರ ಅಧ್ಯಕ್ಷತೆಯಲ್ಲಿ ಡಿ.07 ರ ಸೋಮವಾರ ಬೆಳಗ್ಗೆ ಸಮಯ 10 ಗಂಟೆಗೆ ಕಡಬದ ಮುಖ್ಯಪೇಟೆಯಲ್ಲಿ ಕಾರ್ಯಕ್ರಮ ನಡೆಸಲಿದ್ದಾರೆ ಎಂದು ಕಡಬ ತಾಲೂಕು ಶಾಖೆಯ ಸಂಘಕರು ತಿಳಿಸಿದ್ದಾರೆ.

Also Read  WWE ಪ್ರಿಯರಿಗೆ ಟೇಕರ್ ಶಾಕ್ ➤ ಕುಸ್ತಿ ಅಂಗಳಕ್ಕೆ ವಿದಾಯ ಹೇಳಿದ "ಅಂಡರ್ ಟೇಕರ್"

 

error: Content is protected !!
Scroll to Top