ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಶೀಘ್ರ ಆಗಬೇಕಿದೆ ➤ ರಾಜ್ಯ ಸರ್ಕಾರಕ್ಕೆ  ಆಗ್ರಹಿಸಿದ ಪೇಜಾವರ ಶ್ರೀ 

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.04: ರಾಜ್ಯದಲ್ಲಿ ಬಿಜೆಪಿ ಸಕಾರವಿದ್ದರು ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರುವಲ್ಲಿ ನಾಯಕರು ಎಡವಿದ್ದಾರೆ ಎಂದು ಈಗಾಗಲೇ ಹಲವಾರು ಸಂಘಟನೆಗಳಿಂದ ಹಾಗೂ ಹಲವು ಪಕ್ಷದ ಮುಖಂಡರಿಂದ ಕೂಗುಗಳು ಕೇಳಿ ಬರುತಿದೆ.

 

ಈ ನಡುವೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕೂಡಲೇ ಆಗಬೇಕು ಎಂದು ಆಗ್ರಹಿಸಿದ್ದಾರೆ.ಮಂಗಳೂರಿನಲ್ಲಿ ಮಾತನಾಡಿದ ಅವರು ಕೆಲ ಸಬೂಬುಗಳನ್ನು ಹೇಳಿ ಈ ಕಾಯ್ದೆ ಜಾರಿಗೆ ಬಾರದಂತೆ ತಡೆ ಒಡ್ಡಲಾಗಿದೆ.ಭರತ ಭೂಮಿಯಲ್ಲಿ ಗೋವುಗಳು ಪರಮ ಪೂಜನೀಯ ಆಗಿವೆ ನಮ್ಮ ಬದುಕಿಗೆ ಗೋಗಳು ಅತ್ಯಂತ ಸಮೀಪ ಆಗಿವೆ.ಗೋವಂಶ ಉಳಿಸಲು ರಾಜ್ಯ ಸರ್ಕಾರ ಕೂಡಲೇ ತೀರ್ಮಾನ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

Also Read  ಇಂಡಿಯಾ ಓಪನ್ ಬಾಕ್ಸಿಂಗ್ ➤ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ ತಂದಿತ್ತರು 12 ಬಂಗಾರದ ಪದಕ

error: Content is protected !!
Scroll to Top