ಕಡಬ: ಜೋಯೆಲ್ ಸ್ಕರಿಯ ಅವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪುರಸ್ಕಾರ

(ನ್ಯೂಸ್ ಕಡಬ) newskadaba.com ಕಡಬ, ಡಿ. 04. ಮಂಗಳೂರಿನ ಸೈಂಟ್ ಆ್ಯಗ್ನೆಸ್ ಕಾಲೇಜಿನಲ್ಲಿ ಎಂಎಸ್ಸಿ (Big Data Analytics) ವಿದ್ಯಾರ್ಥಿಯಾಗಿರುವ ಕಡಬದ ಜೋಯೆಲ್ ಸ್ಕರಿಯ ಅವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪುರಸ್ಕಾರ ಲಭಿಸಿದೆ.

ವೈಯಕ್ತಿಕ ನೆಲೆಯಲ್ಲಿ ವಿವಿಧ ರೀತಿಯಲ್ಲಿ ಅತೀ ಹೆಚ್ಚು ಡಿಜಿಟಲ್ ಮಂಡಲ ಆರ್ಟ್ಸ್ ರಚನೆ ಮಾಡಿರುವ ಅವರ ಸಾಧನೆಯನ್ನು ಗುರುತಿಸಿ ಸಂಸ್ಥೆಯು ಈ ಪುರಸ್ಕಾರ ನೀಡಿದೆ. ಇವರು ಕಡಬದ ಕೇಳಂಕುನ್ನೆಲ್ ಸ್ಕರಿಯ ಹಾಗೂ ಬೆಟ್ಟಿ ದಂಪತಿಯ ಪುತ್ರ.

error: Content is protected !!
Scroll to Top