ಮಂಗಳೂರು: ಮೃತ ಮೀನುಗಾರರ ಕುಟುಂಬಕ್ಕೆ ಪರಿಹಾರ ವಿತರಣೆ

(ನ್ಯೂಸ್ ಕಡಬ) newskadaba.com ಮಂಗಳೂರುಡಿ. 03: ಪರ್ಸೀನ್ ಬೋಟ್ ದುರಂತದಲ್ಲಿ ಮೃತರಾದ ಆರು ಮಂದಿ ಮೀನುಗಾರರ ಕುಟುಂಬಕ್ಕೆ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ದಕ್ಷಿಣ ಕನ್ನಡ ಜಿಲ್ಲಾಡಳಿತ ಕಚೇರಿಯಲ್ಲಿ ಇಂದು (ಗುರುವಾರ) ಪರಿಹಾರದ ಚೆಕ್ ವಿತರಿಸಿದರು.

ಒಂದು ಕುಟುಂಬಕ್ಕೆ ತಲಾ 6 ಲಕ್ಷ ರೂ.ನಂತೆ ಒಟ್ಟು 36 ಲಕ್ಷ ರೂ.ನ ಚೆಕ್ ವಿತರಿಸಲಾಯಿತು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಉಪಸ್ಥಿತರಿದ್ದರು.

Also Read  ನೆಲಕ್ಕೆ ಬಡಿದು ಅಣ್ಣನಿಂದಲೇ ತಂಗಿಯ ಬರ್ಬರ ಹತ್ಯೆ.!

 

error: Content is protected !!
Scroll to Top