100ಕ್ಕೂ ಹೆಚ್ಚು ದೇಶಗಳಿಗೆ ಮಸಾಲೆ ಘಮ ಪಸರಿಸಿದ M.D.H ಮಾಲೀಕ ಧರ್ಮಪಾಲ್ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ನವದೆಹಲಿಡಿ. 03: ನೂರಕ್ಕೂ ಹೆಚ್ಚು ದೇಶಗಳಿಗೆ ಮಸಾಲೆ ಘಮ ಪಸರಿಸಿದ ಮಹಾಶಯ ಧರ್ಮಪಾಲ್ ಗುಲಾಟಿ(98) ಅವರು ನಿಧನರಾಗಿದ್ದಾರೆ. ಮಹಾಶಿಯಾನ್ ಡಿ ಹಟ್ಟಿ(ಎಂಡಿಎಚ್) ಮಾಲೀಕರಾಗಿದ್ದ ಧರ್ಮಪಾಲ್ ಗುಲಾಟಿ ಅವರು, ತಮ್ಮದೇಯಾ ಮಸಾಲೆ ಬ್ರಾಂಡ್ ಸೃಷ್ಟಿಸಿ ವಿಶ್ವಾದ್ಯಂತ 100ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿದ್ದರು. ಇವರನ್ನು ‘ಮಸಾಲೆಗಳ ರಾಜ (ಕಿಂಗ್ ಆಫ್ ಸ್ಪೈಸಸ್)’ ಎಂದೇ ಕರೆಯುತ್ತಿದ್ದರು. ಗುಲಾಟಿ ಅವರು ಕಳೆದ ಮೂರು ವಾರಗಳಿಂದ ನವದೆಹಲಿ ಮಾತಾ ಚನನ್ ದೇವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಬುಧವಾರ ರಾತ್ರಿ ಅವರ ಸ್ಥಿತಿ ಗಂಭೀರವಾಯಿತು. ಹೃದಯಾಘಾತದಿಂದ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

 

ಮಹಾಶಯ ಎಂದೇ ಜನಪ್ರಿಯರಾಗಿದ್ದ ಗುಲಾಟಿ ಅವರು, 1919ರಲ್ಲಿ ಪಾಕಿಸ್ತಾನದ ಸಿಯಾಲ್ಕೋಟ್ ನಲ್ಲಿ ಜನಿಸಿದ್ದರು. ಇವರ ತಂದೆ ಚಿಕ್ಕ ಅಂಗಡಿಯನ್ನು ಇಟ್ಟುಕೊಂಡಿದ್ದರು. 1947ರಲ್ಲಿ ದೇಶ ಇಬ್ಭಾಗವಾದ ಬಳಿಕ ಇವರ ಕುಟುಂಬ ದೆಹಲಿಗೆ ಆಗಮಿಸಿತು. ಬಳಿಕ 1953ರಲ್ಲಿ ಗುಲಾಟಿ ಅವರು ದೆಹಲಿ ಚಾಂದನಿ ಚೌಕ್ ಬಳಿ ಬಾಡಿಗೆ ಮಳಿಗೆ ಪಡೆದು ಮಹಾಶಿಯಾನ್ ಡಿ ಹಟ್ಟಿ(ಎಂಡಿಎಚ್) ಹೆಸರಲ್ಲಿ ಅಂಗಡಿ ಆರಂಭಿಸಿದರು.

Also Read  ಅ.8: ಇಂದು ಭಾರತೀಯ ವಾಯುಪಡೆ ದಿನಾಚರಣೆ

 

ಕರೋಲ್ ಭಾಗ್‍ನಲ್ಲಿ ಸಣ್ಣ ಅಂಗಡಿ ಹೊಂದಿದ್ದ ಗುಲಾಟಿ ಅವರು, ತಮ್ಮ ಎಂಡಿಎಚ್‍ಯನ್ನು ಭಾರತದಲ್ಲೇ ನಂ.ಮಸಾಲೆ ಬ್ರಾಂಡ್ ಬೆಳೆಸಿದರು. ಇವರು 1959ರಲ್ಲಿ ಅಧೀಕೃತವಾಗಿ ಕಂಪನಿಯನ್ನು ಆರಂಬಿಸಿದರು. ಕೀರ್ತಿ ನಗರದಲ್ಲಿ ತುಂಡು ಭೂಮಿ ಖರಿದಿಸಿ ಉತ್ಪಾದನಾ ಘಟಕ ಆರಂಭಿಸಿದರು. ಇದೀಗ ಎಂಡಿಎಚ್ ಬರೋಬ್ಬರಿ 50 ವಿಧದ ಮಸಾಲೆಗಳನ್ನು ಉತ್ಪಾದಿಸುತ್ತದೆ. ದೇಶಾದ್ಯಂತ 15 ಕಾರ್ಖಾನೆಗಳನ್ನು ಸಂಸ್ಥೆ ಹೊಂದಿದೆ. ಮಾತ್ರವಲ್ಲದೆ ವಿಶ್ವಾದ್ಯಂತ ಮಸಾಲೆ ಪದಾರ್ಥಗಳನ್ನು ರಫ್ತು ಮಾಡುತ್ತದೆ. ಅಲ್ಲದೆ ಗುಲಾಟಿ ಅವರು ಎಫ್‍ಎಂಸಿಜಿ(ಫಾಸ್ಟ್ ಮೂವಿಂಗ್ ಕನ್ಸೂಮರ್ ಗೂಡ್ಸ್) ಕಂಪನಿಗಳ ಪೈಕಿ 2017ರಲ್ಲಿ ಅತೀ ಹೆಚ್ಚು ಸಂಬಳ ಪಡೆಯುವ ಸಿಇಒ ಆಗಿದ್ದರು. ಆದರೆ ಇವರು ಓದಿದ್ದು 5ನೇ ತರಗತಿ ಮಾತ್ರ.

error: Content is protected !!
Scroll to Top