ಪರ್ಲಡ್ಕ: ಕಲ್ಲಿಮಾರಿನಲ್ಲಿ ಕಾಂಕ್ರೀಟ್ ರಸ್ತೆಗೆ ಶಿಲಾನ್ಯಾಸ, ಉದ್ಘಾಟನೆ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 03: ಶಾಸಕ ಸಂಜೀವ ಮಠಂದೂರು ಅವರು ನಗರಸಭೆ 19 ನೇ ವಾರ್ಡ್‍ನ ಪರ್ಲಡ್ಕದಲ್ಲಿ ಶಾಸಕರ ವಿಶೇಷ ನಿಧಿಯಿಂದ ರೂ 1.5ಲಕ್ಷದ ಇಂಟರ್ ಲಾಕ್ ಉದ್ಘಾಟನೆ ಮತ್ತು ಕಲ್ಲಿಮಾರಿನಲ್ಲಿ ರೂ.10 ಲಕ್ಷದಲ್ಲಿ ಕಾಂಕ್ರೀಟ್ ರಸ್ತೆಗೆ ಶಿಲಾನ್ಯಾಸವನ್ನು ನೆರವೇರಿಸಿದರು.

 

 

ಈ ಸಂದರ್ಭದಲ್ಲಿ ನಗರಸಭೆ ಸ್ಥಳೀಯ ಸದಸ್ಯರೂ, ಉಪಾಧ್ಯಕ್ಷರೂ ಆಗಿರುವ ವಿದ್ಯಾ ಆರ್ ಗೌರಿ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಸದಸ್ಯರಾದ ದೀಕ್ಷಾ ಪೈ, ಇಂದಿರಾ ಪುಷೋತ್ತಮ, ನಗರಸಭೆ ಅಭಿಯಂತರ ಶ್ರೀಧರ್ ನಾಯ್ಕ್ , ಬಿಜೆಪಿ ನಗರ ಮಂಡಲದ ಪ್ರಧಾನಕಾರ್ಯದರ್ಶಿ ಜಯಶ್ರೀ ಎಸ್ ಶೆಟ್ಟಿ, ಸ್ಥಳೀಯರಾದ ಅಬ್ದುಲ್ ಹಮೀದ್, ಸುಭಾಷ್ ರೈ ಬೆಲ್ಳಿಪ್ಪಾಡಿ, ಸರಕಾರಿ ಆಸ್ಪತ್ರೆಗೆ ಆರೋಗ್ಯ ರಕ್ಷಾ ಸಮಿತಿ ಸದಸ್ಯ ರಫೀಕ್ ದರ್ಬೆ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Also Read  ಫಿಲಿಫೈನ್ಸ್ ನಲ್ಲಿ ಚಂಡಮಾರುತ: ಪ್ರವಾಹ, ಭೂಕುಸಿತದಿಂದ 14 ಮಂದಿ ಸಾವು

 

error: Content is protected !!
Scroll to Top