ರಾಜ್ಯದ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ವಿದ್ಯಾವಿನ್ ಟೋಲ್ ಫ್ರೀ ನಂಬರ್ ಲೋಕಾರ್ಪಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 03: ಸರ್ವ ಶಿಕ್ಷಣ ಅಭಿಯಾನ ಕಚೇರಿ ಸಭಾಂಗಣದಲ್ಲಿ ಕಳೆದ ದಿನ ರಾಜ್ಯದ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗಾಗಿ ವಿದ್ಯಾವಿನ್ ಟೋಲ್ ಫ್ರೀ ನಂಬರ್ 18005724920 ನ್ನು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ರವರು ಲೋಕಾರ್ಪಣೆ ಮಾಡಿದರು.

 

 

ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಾಥಮಿಕ ಹಾಗೂ ಪ್ರಾಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ಕೋವಿಡ್ ಮಹಾಮಾರಿ ಎಲ್ಲಾ ಕ್ಷೇತ್ರಗಳ ಮೇಲೂ ಕರಾಳ ಛಾಯೆ ಬೀರಿದೆ. ಶಿಕ್ಷಣ ಕ್ಷೇತ್ರ, ಶಾಲೆಗಳ ಮೇಲೆ ಇದರ ಕರಿಛಾಯೆ ಹೆಚ್ಚು ವ್ಯಾಪಿಸಿದೆ. ಮಕ್ಕಳ ಪರಿಸ್ಥಿತಿಯನ್ನು ನೋಡಿದರೆ ಬೇಸರವಾಗುತ್ತಿದೆ. ಶಾಲೆಗಳು ಆರಂಭವಾಗದೇ ಇರುವುದರಿಂದ ಬಾಲಕಾರ್ಮಿಕ, ಬಾಲ್ಯವಿವಾಹ ಪದ್ಧತಿಗಳು ನಡೆಯುತ್ತಿವೆ, ಹಾಗೂ ಒಂದು ರೀತಿಯ ಗೋಂದಲದ ವಾತಾವರಣ ಕೂಡ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ವಿದ್ಯಾವಿನ್ ಟೋಲ್ ಪ್ರೀ 18005724920 ನಂಬರ್ ಮೂಲಕ ಮಕ್ಕಳಿಗೆ ಕಲಿಯಬೇಕು ಎನ್ನುವ ಇಚ್ಚೆ ಮೂಡಿಸಲು ಹೊರಟಿರುವ ವಿದ್ಯಾವಿನ್ ಯೋಜನೆ ಶ್ಲಾಘನೀಯ ಎಂದರು. ಇನ್ನು ವಿದ್ಯಾವಿನ್ ಶಿಕ್ಷಣ ಕಾರ್ಯಕ್ರಮದ ಸಂಸ್ಥಾಪಕ ಹಾಗೂ ಪತ್ರಕರ್ತ ಕೆ.ವಿ ಪ್ರಕಾಶ್ ಮಾತಾನಾಡಿ, ಗ್ರಾಮೀಣ ಭಾಗ ಸೇರಿದಂತೆ ರಾಜ್ಯದಲ್ಲಿ ಆನ್ ಲೈನ್ ಶಿಕ್ಷಣ ವಿದ್ಯಾರ್ಥಿಗಳಿಗೆ ತಲುಪಿದ ಮಟ್ಟವನ್ನು ತಿಳಿಯುವ ಮೊದಲ ಪ್ರಯತ್ನ ಇದಾಗಿದೆ ಎಂದರು.

Also Read  ಎಡಮಂಗಲ: ವ್ಯಕ್ತಿ ಮೃತ್ಯು

 

error: Content is protected !!
Scroll to Top