ಮಂಗಳೂರು :ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಕನಕದಾಸ ಜಯಂತಿ ಆಚರಣೆ.

(ನ್ಯೂಸ್ ಕಡಬ) newskadaba.com ಮಂಗಳೂರುಡಿ. 03: ಕನಕದಾಸರು ಕರ್ನಾಟಕ ಮಾತ್ರವಲ್ಲ ಲೋಕಗುರು. ಮನುಷ್ಯನ ಜೀವನದುದ್ದಕ್ಕೂ ಅಜ್ಞಾನದಿಂದ ಜ್ಞಾನದತ್ತ, ವೈಯಕ್ತಿಕ, ಕುಟುಂಬ, ಸಮೂಹ, ಸಮಾಜ, ಲೋಕದಕತ್ತಲನ್ನು ಕಳೆದು ಬೆಳಕಿನತ್ತ ಕೊಂಡೊಯ್ಯಲು ಪ್ರೇರಣೆ ನೀಡಿದವರು. ಮನುಷ್ಯ ತನ್ನ ಮೌಢ್ಯಾಂಧಕಾರದಿಂದ ಹೊರಬರಲು ಸಮಾಜವನ್ನು ಟೀಕಿಸಿ, ತಿದ್ದಿ, ಮನುಷ್ಯನ ಆತ್ಮಸಾಕ್ಷಾತ್ಕಾರಕ್ಕೆ ಸ್ಪೂರ್ತಿಯಾದವರು. ಈ ಜಗತ್ತಿನಲ್ಲಿ ಭಕ್ತಿಗಿಂತ ಶ್ರೇಷ್ಠವಾದ ಶಕ್ತಿ ಮತ್ತೊಂದಿಲ್ಲ ಎಂದು ತಮ್ಮ ಮೂಲಕ ಜಗತ್ತಿಗೆ ಸಾರಿದವರು. ವ್ಯಕ್ತಿಯನ್ನು ಸಮಾಜದ ಕೇಂದ್ರ ಬಿಂದುವಾಗಿಸಲು ಆತನ ಸಿರಿ ಸಂಪತ್ತು ಮಾತ್ರವಲ್ಲದೆ ಆತನಗುಣ, ದೋಷಗಳೂ, ದೃಷ್ಠಿಕೋನ, ನಡವಳಿಕೆಗಳೂ ಮುಖ್ಯ ಪಾತ್ರ ವಹಿಸುತ್ತದೆಎಂದರು. ಮುಂದುವರೆದು ಕನಕದಾಸರು ಸಮಾಜ, ವ್ಯಕ್ತಿ, ಭಕ್ತಿ, ಮೌಢ್ಯತೆಯ ಕುರಿತಾಗಿ ಕೀರ್ತನೆಗಳನ್ನು ಮಾತ್ರವಲ್ಲದೆ ತಮ್ಮ ಗುರು-ಶಿಷ್ಯ ಹಾಗೂ ಶಿಕ್ಷಣದ ಕುರಿತಾದ ಕೀರ್ತನೆಗಳ ಮೂಲಕ ಶಿಕ್ಷಣ ಮತ್ತು ಶಿಕ್ಷಕ ವಿದ್ಯಾರ್ಥಿಗಳ ವಿದ್ಯಾರ್ಥಿ ಜೀವನ ಮತ್ತು ಕಲಿಕೆಯ ಮೇಲೆ ತುಂಬಾ ಪ್ರಭಾವ ಬೀರುತ್ತದೆ ಎನ್ನುವುದನ್ನು ತಿಳಿಯಬಹುದು ಎಂದು ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಹಾಗೂ ಮೈಸೂರಿನ ಮಹಾರಾಣಿ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರಾದಡಾ. ಬಿ.ವಿ ವಸಂತ್‍ ಕುಮಾರ್ ಹೇಳಿದರು.

Also Read  ಜೇನು ಕೃಷಿ ತರಬೇತಿ ಕಾರ್ಯಕ್ರಮ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಕ್ತಿ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿಗಳಾದ ಡಾ.ಕೆ.ಸಿ ನಾೈಕ್ ಕಾರ್ಯಕ್ರಮವನ್ನುದ್ದೇಶಿಸಿ ಕನಕದಾಸರ ಕೀರ್ತನೆಗಳು ಕೇವಲ ಬರಹವಲ್ಲ, ಅವುಗಳು ಮನುಕುಲದ ಮೇಲೆ ಬೆಳಕನ್ನು ಚೆಲ್ಲುವ ಶಕ್ತಿಯಾಗಿವೆ. ಇಂತಹ ಸಾಧಕ ಸಂತರ ಜನ್ಮದಿನಾಚರಣೆಗಳನ್ನು ಸ್ಮರಿಸಿ ಇನ್ನು ಬಹಳಷ್ಟು ಕಾರ್ಯಕ್ರಮಗಳು ನಡೆಯಬೇಕು. ಆ ಮೂಲಕ ಸಮಾಜವನ್ನುಅಂಧಕಾರದಿಂದ ಬೆಳಕಿನತ್ತ ಕೊಂಡೊಯ್ಯಲು ಸಾಧ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರರಾದ ರಮೇಶ್ ಕೆ, ಸಂಸ್ಥೆಯ ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್‍ ರೈ ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಸುಧೀರ್ ಎಂ. ಕೆ, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲರಾದ ವಿದ್ಯಾಕಾಮತ್ ಜಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪೂಜಾ ನಾಯರ್‍ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿ ಸಮ್ಯಖ್‍ಚಡಗಾ ಕೀರ್ತನೆಯನ್ನು ಹಾಡಿದರು. ಶಿಕ್ಷಕಿ ಅಕ್ಷತ ಸ್ವಾಗತಿಸಿದರು. ಅಧ್ಯಾಪಕರಾದ ಶರಣಪ್ಪ ಅತಿಥಿ ಪರಿಚಯ ಮಾಡಿದರು. ದೀಪ್ತಿ ಧನ್ಯವಾದ ಸಮರ್ಪಿಸಿದರು. ಶಿಕ್ಷಕಿ ಪ್ರೇಮಲತ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Also Read  “ವಿದ್ಯಾರ್ಥಿ ಜೀವನದಲ್ಲಿ ಮಾತ್ರ ಸುಸಂಸ್ಕೃತ ಮತ್ತು ಸುವ್ಯವಸ್ಥೆ ಬೆಳೆಸಿಕೊಳ್ಳಲು ಸಾಧ್ಯ” ➤ ಶ್ರೀ ಗುರುಪ್ರಸಾದ್

error: Content is protected !!
Scroll to Top