ಮಂಗಳೂರು: ಮುಂದಿನ ಐದು ವರ್ಷಗಳಲ್ಲಿ ಪೊಲೀಸರಿಗೆ ಮನೆಗಳ ನಿರ್ಮಾಣ ➤ ಗೃಹ ಸಚಿವ ಬೊಮ್ಮಾಯಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 03: ಗೃಹ ಸಚಿವ ಬಸವರಾಜ ಬೊಮ್ಮಾಯಿ ರವರು ರಾಜ್ಯದಲ್ಲಿ ಮುಂದಿನ ಐದು ವರ್ಷಗಳಲ್ಲಿ ಅಂದರೇ (2025) ರೊಳಗೆ ಪೊಲೀಸ್ ಸಿಬ್ಬಂದಿಗಾಗಿ 11000 ಮನೆಗಳ ನಿರ್ಮಾಣ ಗುರಿಯನ್ನು ರಾಜ್ಯ ಸರಕಾರ ಹೊಂದಿದ್ದು, ಇದಕ್ಕಾಗಿ ಬಜೆಟ್ ನಲ್ಲಿ ಮಂಜುರಾತಿ ನೀಡಲಾಗಿದೆ ಎಂದು ಹೇಳಿದ್ದಾರೆ.

 

 

ದ.ಕ ಜಿಲ್ಲೆಯಲ್ಲಿ 192 ಗೃಹ ನಿರ್ಮಾಣ ಬೇಡಿಕೆ ಬಂದಿದ್ದು, ನಿವೇಶನ ಲಭ್ಯ ಇರುವ 74 ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡುವ ಕುರಿತು ಜಿಲ್ಲಾಧಿಕಾರಿ ಕಛೇರಿಯಿಂದ ವರದಿ ಬಂದಿದೆ. ಇದನ್ನು 100 ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದರು. ನಗರದ ಪಣಂಬೂರಿನಲ್ಲಿ ಪೊಲೀಸ್ ಸಿಬ್ಬಂದಿಗಾಗಿ ನಿರ್ಮಿಸಲಾಗಿರುವ 112 ಮನೆಗಳ ಸಂಕೀರ್ಣವನ್ನು ಇಂದು ಉದ್ಘಾಟಿಸಿ ಮಾತನಾಡಿದ ಅವರು, ಇದರೊಂದಿಗೆ ಆಜ್ಯದಲ್ಲಿ ಒಟ್ಟು ಶೇ. 60 ರಷ್ಟು ಪೊಲೀಸ್ ಸಿಬ್ಬಂದಿಗೆ ಮನೆ ಸೌಕರ್ಯ ದೊರೆಯಲಿದೆ ಹಾಗೂ ಜನವರಿಯಿಂದ ಈ ಕಾರ್ಯ ಆರಂಭವಾಗಲಿದೆ ಎಂದಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಪಡಿಸುವುದರೊಂದಿಗೆ ಪೊಲೀಸ್ ಸಿಬ್ಬಂದಿಯ ಮಕ್ಕಳ ಉನ್ನತ ಶಿಕ್ಷಣಕ್ಕೆ ಅಗತ್ಯ ನೆರವು ನೀಡುವ ಚಿಂತನೆ ತನ್ನದಾಗಿದೆ ಎಂದರು.

 

error: Content is protected !!

Join the Group

Join WhatsApp Group