ಮಂಗಳೂರು : ಮೀನು ಮಾರುಕಟ್ಟೆಯಲ್ಲಿ ಆಟಿಕೆಯ ನೋಟು ನೀಡಿ ವಂಚನೆ

(ನ್ಯೂಸ್ ಕಡಬ) newskadaba.com ಮಂಗಳೂರುಡಿ. 03: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ನಾಡು ಮೀನು ಮಾರುಕಟ್ಟೆಯಲ್ಲಿ ವ್ಯಕ್ತಿಯೋರ್ವ ಮೀನು ಮಾರಾಟ ಮಾಡುತ್ತಿದ್ದ ಮಹಿಳೆಯರಿಗೆ 100 ರೂ. ಹಾಗೂ 200 ರೂ. ಮುಖಬೆಲೆಯ ನೋಟುಗಳನ್ನು ನೀಡಿ ವಂಚನೆ ಮಾಡಿದ ಬಗ್ಗೆ ಮಹಿಳೆಯರು ದೂರಿದ್ದಾರೆ.

 

 

ವಂಚಕ ವ್ಯಕ್ತಿಯು ಮೀನು ವ್ಯಾಪಾರ ಮಾಡಿ ನೂರು ರೂಪಾಯಿಯ 5 ನೋಟುಗಳಲ್ಲಿ ಆಟಿಕೆಯ ನೋಟನ್ನು ಇಟ್ಟು ಮಹಿಳೆಯರಿಗೆ ಮೋಸ ಮಾಡಿದ್ದಾನೆ. ಹಾಗೆ ಕೆಲದಿನಗಳ ಹಿಂದೆ ಇನ್ನೊಬ್ಬ ವ್ಯಕ್ತಿ ಬಂದು ಮೀನು ತೆಗೆದುಕೊಂಡು 200 ರೂಪಾಯಿ ಮುಖಬೆಲೆಯ ನೋಟಿನಲ್ಲಿ ಆಟಿಕೆಯ 200 ರೂ. ಇಟ್ಟು ಮೋಸ ಮಾಡಿದ್ದಾನೆ ಎಂದು ಮಹಿಳೆಯರು ಆರೋಪಿಸಿದ್ದಾರೆ. ಆಟಿಕೆಯ ನೋಟ್ ನೀಡಿ ವಂಚನೆ ಬಗ್ಗೆ ಮಹಿಳೆಯರು ಮುಲ್ಕಿ ಠಾಣೆಗೆ ದೂರು ನೀಡಿದ್ದಾರೆ.

Also Read  ಪುತ್ತೂರು: ಕಾಲೇಜು ವಿದ್ಯಾರ್ಥಿಗಳ ನಡುವೆ ಘರ್ಷಣೆ..!

 

error: Content is protected !!
Scroll to Top