ಇಂದು A.S.I ಆಗಿ ಅಧಿಕಾರ ಸ್ವೀಕರಿಸಬೇಕಿದ್ದ ಮುಖ್ಯ ಪೇದೆ ರಸ್ತೆ ಅಪಘಾತದಲ್ಲಿ ಮೃತ್ಯು.!

(ನ್ಯೂಸ್ ಕಡಬ) newskadaba.com ಚಿಕ್ಕಮಂಗಳೂರು, ಡಿ. 03: ಚಿಕ್ಕಮಂಗಳೂರು ತಾಲೂಕಿನ ಹಿರೇಗೌಡ ಸಮೀಪ ಕಳೆದ ದಿನ ಬೈಕ್ ಹಾಗೂ ಕಾರು ನಡುವೆ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಇಂದು ಎಎಸ್ಸೈ ಆಗಿ ಪದೋನ್ನತಿ ಆಗಬೇಕಿದ್ದ ಪೊಲೀಸ್ ಮುಖ್ಯ ಪೇದೆ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಸಿದ್ದರಾಮಪ್ಪ ಎಂದು ಗುರುತಿಸಲಾಗಿದೆ.

 

 

ಮೂಲತ: ಅಜ್ಜಂಪುರ ತಾಲೂಕಿನ ತಮ್ಮಟಹಳ್ಳಿ ನಿವಾಸಿಯಾಗಿದ್ದ ಇವರು ಸತತ 25 ವರ್ಷ ಕಾಲ ಸೇವೆ ಸಲ್ಲಿಸಿದ್ದು, ಕಳೆದ ದಿನ ಕರ್ತವ್ಯ ಮುಗಿಸಿ ಸಖರಾಯಪಟ್ಟಣದಿಂದ ಚಿಕ್ಕಮಂಗಳೂರಿಗೆ ಬರುತ್ತಿದ್ದ ವೇಳೆ ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಢಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರು ಡಿ.03 ರ (ಇಂದು) ಎಎಸ್ಸೈ ಆಗಿ ಭಡ್ತಿಪಡೆಯುತ್ತಿದ್ದರು. ಎಎಸ್ಸೈ ಸಮವಸ್ತ್ರ ಕೂಡ ಸಿದ್ಧ ಮಾಡಿಕೊಂಡಿದ್ದ ಸಿದ್ದರಾಮಪ್ಪ ಖುಷಿಯಿಂದ ಕರ್ತವ್ಯ ಮುಗಿಸಿ ಮನೆಗೆ ತೆರಳುವ ವೇಳೆ ಈ ದುರ್ಘಟನೆಯಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Also Read  ಮೌಖಿಕ ಪರೀಕ್ಷೆಯಲ್ಲಿ ಫೇಲ್…! - SSLC ವಿದ್ಯಾರ್ಥಿನಿ ಆತ್ಯಹತ್ಯೆ

 

error: Content is protected !!
Scroll to Top