ನೀರು ಕುಡಿಯಲು ಕೃಷ್ಣ ನದಿಗೆ ಇಳಿದಿದ್ದ ಯುವಕನನ್ನು ಎಳೆದೊಯ್ದು ತಿಂದು ಹಾಕಿದ ಮೊಸಳೆ

(ನ್ಯೂಸ್ ಕಡಬ) newskadaba.com ರಾಯಚೂರು ಡಿ. 03: ಕೃಷ್ಣ ನದಿಗೆ ನೀರು ಕುಡಿಯಲು ಹೋದ ಬಾಲಕನನ್ನು ಮೊಸಳೆ ತಿಂದು ಹಾಕಿರುವ ಹೃದಯ ವಿದ್ರಾವಕ ಘಟನೆ ರಾಯಚೂರಿನ ಡೊಂಗಾರಾಂಪುರ ಗ್ರಾಮದಲ್ಲಿ ನಡೆದಿದೆ. ಮಲ್ಲಿಕಾರ್ಜುನ (12) ಮೊಸಳೆಗೆ ಬಲಿಯಾದ ಬಾಲಕ.ಬುಧವಾರದಂದು ಮಲ್ಲಿಕಾರ್ಜುನ ತನ್ನ ಸ್ನೇಹಿತರೊಂದಿಗೆ ದನ ಮೇಯಿಸಲು ಕೃಷ್ಣ ನದಿ ದಂಡೆಯತ್ತ ಹೋಗಿದ್ದ.

ಮಧ್ಯಾಹ್ನದ ವೇಳೆ ಗೆಳೆಯರು ಎಲ್ಲ ಗೆಳೆಯರು ಸೇರಿಕೊಂಡು ಊಟ ಮಾಡಿದ್ದಾರೆ. ಊಟ ಮಾಡಿದ ಬಳಿಕ ಬಾಯಾರಿಕೆಯಾದ ಹಿನ್ನೆಲೆ ಕೃಷ್ಣ ನದಿಯಲ್ಲಿ ನೀರು‌ ಕುಡಿಯಲು ಮಲ್ಲಿಕಾರ್ಜುನ ನೀರಿಗೆ ಇಳಿದಿದ್ದಾನೆ. ಈ ವೇಳೆ ಬಕಾ ಪಕ್ಷಿಯಂತೆ ಕಾದು ಕುಳಿತ್ತಿದ್ದ ಮೊಸಳೆ ಅವನ ಮೇಲೆ ದಾಳಿ ನಡೆಸಿದೆ. ಇದನ್ನು ನೋಡುತ್ತಿದ್ದ ಮಲ್ಲಿಕಾರ್ಜುನನ ಸ್ನೇಹಿತರು ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ.

Also Read  3 ದಿನದಲ್ಲಿ 40 ಜನರ ಬ್ಯಾಂಕ್ ಖಾತೆಯಲ್ಲಿದ್ದ ಲಕ್ಷಾಂತರ ಹಣ ನಾಪತ್ತೆ !       

ಬಾಲಕನನ್ನು ಎಳೆದೊಯ್ದ ಮೊಸಳೆ ಬಾಲಕನ ದೇಹವನ್ನ ಸಂಪೂರ್ಣವಾಗಿ ತಿಂದು ತಲೆ ಬುರುಡೆ ಮಾತ್ರ ಬಾಕಿ ಬಿಟ್ಟಿದೆ. ನಿನ್ನೆ ರಾತ್ರಿ ಬಾಲಕನ ತಲೆ ಬುರುಡೆ ಪತ್ತೆಯಾಗಿದೆ. ಸದ್ಯ ಇಡೀ ಡೊಂಗಾರಾಂಪುರ ಗ್ರಾಮದಲ್ಲಿ ಶೋಕದ ವಾತಾರವಣ ನಿರ್ಮಾಣವಾಗಿದೆ. ಇಂತಹ ಹಲವು ಘಟನೆಗಳು ಕೃಷ್ಣ ನದಿಯಲ್ಲಿ ನಡೆದಿದೆ.

error: Content is protected !!
Scroll to Top