ಪುತ್ತೂರು: ಅಕ್ರಮ ಗಾಂಜಾ ಸಾಗಾಟ ➤ ಕಿರಾತಕ ಆರೋಪಿ ಪೊಲೀಸರ ಬಲೆಗೆ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 03: ಆರ್ಯಾಪು ಗ್ರಾಮದ ಕಲ್ಲರ್ಪೆ ಎಂಬಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಮಂಜನಾಡಿ ಕುಚ್ಚಿಗುಡ್ಡೆ ನಿವಾಸಿ ಫೈಝಲ್ ಅವರ ಪುತ್ರ ಹಾತಿಮ್ ಎಂದು ಗುರುತಿಸಲಾಗಿದೆ.

 

 

ಎಸ್ಪಿ ಬಿ. ಎಮ್. ಲಕ್ಷೀಪ್ರಸಾದ್ ಅವರ ನಿದೇಶನದಂತೆ ಸಂಪ್ಯ ಎ.ಎಸ್ಪಿ ಲಖನ್ ಸಿಂಗ್ ಯಾದವ್ ಮತ್ತು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಅವರ ಮಾರ್ಗದರ್ಶನದಂತೆ ಸಂಪ್ಯ ಎಸ್.ಐ ಉದಯರವಿ ನೇತೃತ್ವದಲ್ಲಿ ಪೊಲೀಸರು ಕಾರ್ಯಚರಣೆ ನಡೆಸಿ ಸುಳ್ಯಕ್ಕೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗಾಂಜಾವನ್ನು ಆರ್ಯಾಪು ಗ್ರಾಮದ ಕಲ್ಲರ್ಪೆಯಲ್ಲಿ ಪತ್ತೆ ಹಚ್ಚಿದ್ದಾರೆ. ಆತನಿಂದ ರೂ.42,600 ಮೌಲ್ಯದ 2.130 ಕಿ.ಗ್ರಾಂ ತೂಕದ ಗಾಂಜಾ, ರೂ 5 ಸಾವಿರ ಮೌಲ್ಯದ ಐಫೋನ್, ಹಾಗೂ ಆತನಲ್ಲಿದ್ದ ರೂ.5900 ನಗದು ಮತ್ತು ಕೃತ್ಯಕ್ಕೆ ಬಳಸಿದ ರೂ.1 ಲಕ್ಷ ಮೌಲ್ಯದ ಅಟೋ ರಿಕ್ಷಾ ಸಹಿತ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Also Read  ಫೇಸ್​ಬುಕ್ ಗೆಳತಿ ಭೇಟಿಗೆ ದೂರದಿಂದ ಬಂದ ಯುವಕ ➤ ಗೆಳತಿ ಕಂಡು ಬೆಚ್ಚಿ ಬಿದ್ದು ಚಾಕು ಎಸೆದ.!!

 

error: Content is protected !!
Scroll to Top