ಬೆಳ್ಳಾರೆ : ಚುನಾವಣಾ ಬಹಿಷ್ಕಾರದ ಬ್ಯಾನರ್ ಹಾಕಿದ ಸ್ಥಳೀಯರು

(ನ್ಯೂಸ್ ಕಡಬ) newskadaba.com ಬೆಳ್ಳಾರೆ ಡಿ. 02 : ರಾಜ್ಯದಲ್ಲಿ ಎರಡು ಹಂತದ ಗ್ರಾಮ ಪಂಚಾಯತ್​ ಚುನಾವಣೆ ಘೋಷಣೆ ಆಗಿದೆ. ಈ ಹಿನ್ನೆಲೆ ಮೂಲ ಸೌಕರ್ಯ ಮರೀಚಿಕೆ ಆಗಿರುವ ಗ್ರಾಮಗಳು ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಿವೆ.

ಸುಳ್ಯ ತಾಲೂಕಿನ ಬೆಳ್ಳಾರೆಯ ತಡಗಜೆಯಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿ ಓಟ್​ ಕೇಳಲು ಬರುವವರಿಗೆ ಪರೋಕ್ಷವಾಗಿ ಅಣುಕಿಸುವಂತೆ ಮಾಡಿದ್ದಾರೆ.ಕಳೆದ 25 ವರ್ಷಗಳಿಂದ ಬೆಳ್ಳಾರೆ ಗ್ರಾಮದ 3ನೇ ವಾರ್ಡ್​​ನಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ಬೀದಿ ದೀಪದ ವ್ಯವಸ್ಥೆ ಸರಿಯಾಗಿ ಇಲ್ಲ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.

Also Read  ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಕೆ ವಸತಿ ಸಚಿವ ವಿ.ಸೋಮಣ್ಣ ಭೇಟಿ

Xl

error: Content is protected !!
Scroll to Top