ಮಂಗಳೂರು ಬೋಟ್ ದುರಂತ: ಉಳಿದ ಮೂವರ ಶವವೂ ಪತ್ತೆ ➤ ಸಚಿವರಿಂದ ಮೃತದೇಹಗಳ ಅಂತಿಮ ದರ್ಶನ

(ನ್ಯೂಸ್ ಕಡಬ) newskadaba.com ಮಂಗಳೂರು ಡಿ. 02 : ಇಂದು ಮತ್ತೆ ಕಾರ್ಯಾಚರಣೆ ಪ್ರಾರಂಬಿಸಿದ ಬಳಿಕ ಬೆಳಗ್ಗೆ ಚಿಂತನ್ ಮತ್ತು ಅನ್ಸಾರ್ ರ ಶವವು ಪತ್ತೆಯಾಗಿತ್ತು. ಮಧ್ತಾಹ್ನ ದ ವೇಳೆಗೆ ಜಿಯಾವುಲ್ಲಾ ಮತ್ತು ಹಸೈನಾರ್ ರವರ ಶವ ಪತ್ತೆಯಾಗಿದೆ. ಈ ಮೂಲಕ ಕೋಸ್ಟ್ ಗಾರ್ಡ್ ಹಾಗೂ ಮೀನುಗಾರಿಕಾ ಇಲಾಖೆಯ ಜಂಟಿ ಕಾರ್ಯಾಚರಣೆ ಮುಕ್ತಾಯಗೊಂಡಿದೆ. ಮೃತರೆಲ್ಲರೂ ಬೊಕ್ಕಪಟ್ಟ ಹಾಗೂ ಬೋಳಾರು ನಿವಾಸಿಗಳಾಗಿದ್ದು, ಇದೀಗಾ ಶವಗಳನ್ನು ವೆನ್ ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ‘ಶ್ರೀರಕ್ಷಾ’ ಹೆಸರಿನ ಪರ್ಸೀನ್ ಬೋಟು  ದುರಂತದಲ್ಲಿ ಸಮದ್ರ ಪಾಲಾಗಿದ್ದ ಆರು ಜನ ಮೀನುಗಾರರ ಪೈಕಿ ಮೂವರ ಮೃತದೇಹಗಳು  ಕಳೆದ ದಿನ ಪತ್ತೆಯಾಗಿವೆ. ನಗರದ ವೆನ್ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೀನುಗಾರರ ಮೃತದೇಹಗಳ ಅಂತಿಮ ದರ್ಶನ ಪಡೆದರು. ಬಳಿಕ ಮಾತನಾಡಿದ ಸಚಿವರು, ಮೃತರ ಕುಟುಂಬಗಳಿಗೆ ನಾಳೆ ಸಂಜೆಯೇ ಪರಿಹಾರ ನೀಡುವ ಭರವಸೆ ನೀಡಿದರು.ಅಲ್ಲದೆ, ಘಟನೆಗೆ ಕಾರಣವಾದ ಅಂಶಗಳ ಬಗ್ಗೆ ತನಿಖೆ ನಡೆಸಲು ತನಿಖಾ ತಂಡ ರಚಿಸಿದ್ದಾಗಿ ತಿಳಿಸಿದರು.ಸಚಿವರ ಜೊತೆ ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ ಇದ್ದರು.

Also Read  ಜಗತ್ತಿನ 'ದಿ ಬೆಸ್ಟ್ ವಿಸ್ಕಿ' ಬ್ರಾಂಡ್ ಗೆ ಆಯ್ಕೆಯಾದ ಭಾರತೀಯ "ಇಂದ್ರಿ"..!

 

 

error: Content is protected !!
Scroll to Top