ಮೀನುಗಾರಿಕಾ ಬೋಟು ದುರಂತ ➤ ಮೀನಿನ ಬಲೆಯಲ್ಲಿ ಮೀನುಗಾರನ ಶವ ಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು ಡಿ. 02 : ಅರಬ್ಬೀ ಸಮುದ್ರದಲ್ಲಿ ದೋಣಿ ದುರಂತ ಸಂಭವಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾ ಮರೆಯಾದ ಮೀನುಗಾರರ ಪೈಕಿ ಮತ್ತೊಂದು ಮೀನುಗಾರನ ಶವ ಪತ್ತೆಯಾಗಿದೆ.

 

ಬೋಟ್ ಮುಳುಗಡೆಯಾದ ಜಾಗದ ಸ್ವಲ್ಪ ದೂರದಲ್ಲಿ ಶವ ಪತ್ತೆಯಾಗಿದ್ದು ಮೀನಿಗೆ ಹಾಕಿದ್ದ ಬಲೆಯಲ್ಲಿ ಮೀನುಗಾರ ಅನ್ಸರ್ ನ ಶವ ಪತ್ತೆಯಾಗಿದೆ. ಇನ್ನು ಅನ್ಸರ್ ಮಂಗಳೂರಿನ ಬೆಂಗ್ರೆ ನಿವಾಸಿ. ತಣ್ಣೀರುಬಾವಿ ಮುಳುಗು ತಜ್ಞರ ತಂಡದಿಂದ ಕಾರ್ಯಾಚರಣೆಯಲ್ಲಿ ಅನ್ಸರ್ ಶವ ಪತ್ತೆಯಾಗಿದೆ. ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ‘ಶ್ರೀರಕ್ಷಾ’ ಹೆಸರಿನ ಪರ್ಸೀನ್ ಬೋಟು  ದುರಂತದಲ್ಲಿ ಸಮದ್ರ ಪಾಲಾಗಿದ್ದ ಆರು ಜನ ಮೀನುಗಾರರ ಪೈಕಿ ಮೂವರ ಮೃತದೇಹಗಳು  ಕಳೆದ ದಿನ ಪತ್ತೆಯಾಗಿವೆ.

Also Read  ಕಾರವಾರ : ಇಂದು ಮತ್ತು ನಾಳೆ(ಅ.8) ಸಾಗರ ಕವಚ ಅಣುಕು ಕಾರ್ಯಾಚರಣೆ

error: Content is protected !!
Scroll to Top