ಉಡುಪಿ: ಅಂಧ ಕಲಾವಿದನ ಹಣ ಜೇಬುಗಳ್ಳರ ಪಾಲು

(ನ್ಯೂಸ್ ಕಡಬ) newskadaba.com ಉಡುಪಿ, ಡಿ. 02 : ಅಂಧ ಸಂಗೀತ ಕಲಾವಿದನ ಹಣವನ್ನು ಜೇಬುಗಳ್ಳರು ದೋಚಿದ್ದು, ಕಲಾವಿದ ತನ್ನೂರು ಬಾಗಲಕೋಟೆಗೆ ತೆರಳಲು ಟಿಕೆಟ್ ಗೆ ಹಣವಿಲ್ಲದೆ ಉಡುಪಿಯಲ್ಲಿ ಅಸಹಾಯಕ ಪರಿಸ್ಥಿತಿ ಎದುರಿಸಿದ್ದಾರೆ.

ಈ ಸಂದರ್ಭ ಉಡುಪಿ ನಾಗರಿಕ ಸಮಿತಿಯ ಸಹೃದಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ನೆರವಿಗೆ ಬಂದಿದ್ದು, ಅಂಧ ಕಲಾವಿದನನ್ನು ಬಾಗಲಕೋಟೆಗೆ ಬಸ್ಸು ಹತ್ತಿಸಿ ಕಳಿಸಿಕೊಟ್ಟಿದ್ದಾರೆ. ನಗರಸಭೆ ಆಸ್ತಿ ತೆರಿಗೆ ಸಲಹಾ ಕೇಂದ್ರದ ಸಿಬ್ಬಂದಿ ವಿದ್ಯಾ, ಚಂದ್ರಾವತಿ, ಪೂರ್ಣಿಮಾ, ತ್ರಿವೇಣಿ ಅವರು ಹಸಿದ ಕಲಾವಿದನಿಗೆ ಆಹಾರದ ವ್ಯವಸ್ಥೆ, ಪ್ರಯಾಣಿಸಲು ಟಕೆಟ್ ಗೆ ಬೇಕಾದ ಹಣ ಒದಗಿಸಿ ಮಾನವೀಯತೆ ಮೆರೆದಿದ್ದಾರೆ.

Also Read  ವಿದ್ಯುತ್ ಕಂಬ ಬಿದ್ದು ಮೃತಪಟ್ಟ ಯುವಕನ ಕುಟುಂಬಕ್ಕೆ ► ಮೆಸ್ಕಾಂ ಇಲಾಖೆಯಿಂದ ಪರಿಹಾರ ಚೆಕ್ ವಿತರಣೆ

 

error: Content is protected !!
Scroll to Top