ಕೈಕಂಬ: ಕೋಟೆಸಾರ್ ಬಳಿಯಿದ್ದ ಕಬ್ಬಿನ ಹಾಲಿನ ಯಂತ್ರ ಎಗರಿಸಿದ ಖದೀಮರು

(ನ್ಯೂಸ್ ಕಡಬ) newskadaba.com ಕೈಕಂಬ ಡಿ. 02 : ಬಿಳಿನೆಲೆ ಗ್ರಾಮದ ಕೈಕಂಬದಲ್ಲಿ ಕಬ್ಬಿನ ಹಾಲಿನ ಯಂತ್ರವನ್ನು ಕಳ್ಳರು ಕಳೆದ ದಿನ ರಾತ್ರಿ ಕಳವುಗೈದಿರುವ ಪ್ರಕರಣ ಬೆಳಕಿಗೆ ಬಂದಿದೆ.

 

ಕೊರೋನಾ ಮಹಾಮಾರಿಯಿಂದ ಉದ್ಯೋಗ್ಯವನ್ನು ಕಳೆದುಕೊಂಡ ನೇಮಿಚಂದ್ರ ವೆಂಬುವರು ಕೈಕಂಬ ಸಮೀಪದ ಕೋಟೆಸಾರ್ ನದಿಯಪಕ್ಕ ಜೀವನ ನಿರ್ವಹಣೆಗಾಗಿ ಕಬ್ಬಿನ ಹಾಲಿನ ಯಂತ್ರವನ್ನು ಬಳಸಿಕೊಂಡು ಸ್ವ ಉದ್ಯೋಗದಲ್ಲಿ ತೊಡಗಿಕೊಂಡಿದ್ದರು.  ಆದರೆ, ಕಳೆದ ದಿನ ಖದೀಮರು ಈ ಕಬ್ಬಿನ ಹಾಲಿನ ಯಂತ್ರವನ್ನು ಕಳವುಗೈದಿದ್ದಾರೆ. ಇನ್ನು ಈ ಯಂತ್ರ ಎಲ್ಲಿಯಾದರೂ ಕಂಡು ಬಂದಲ್ಲಿ 8197208090, 9480872953 ಈ ಸಂಖ್ಯೆ ಗೆ ಕರೆ ಮಾಡಿ ತಿಳಿಸುವಂತೆ ವಿನಂತಿಸಿಕೊಂಡಿದ್ದಾರೆ.

Also Read  ಮಟ್ಕಾ ಆಡುತ್ತಿದ್ದ ವೇಳೆ ಪೊಲೀಸ್ ದಾಳಿ| ನಾಲ್ವರು ಅರೆಸ್ಟ್

 

error: Content is protected !!
Scroll to Top