ಈಶ್ವರಮಂಗಲ: ಕರೆಂಟ್ ಕಂಬಕ್ಕೆ ಕಾರು ಢಿಕ್ಕಿ

(ನ್ಯೂಸ್ ಕಡಬ) newskadaba.com ಈಶ್ವರಮಂಗಲ, ಡಿ. 02: ಕಾರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ಕಾವು ಈಶ್ವರಮಂಗಲ ರಸ್ತೆಯ ನೆಲ್ಲಿತ್ತಡ್ಕ ಎಂಬಲ್ಲಿ ಇಂದು ನಸುಕಿನ ಜಾವ ನಡೆದಿದೆ.

 

 

ಚಾಲಕ ಮುಸ್ತಾಕ್ ಅವರು ಚಲಾಯಿಸುತ್ತಿದ್ದ ಕಾರು ಮೂಡಬಿದ್ರೆ ಕಡೆಯಿಂದ ಅದೂರು ಕಡೆಗೆ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಈಶ್ವರಮಂಗಲ ಹೊರಠಾಣೆಯ ಪೊಲೀಸರು, ಮೆಸ್ಕಾಂ ಜೆ.ಇ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.

Also Read  ಪುಣ್ಚಪ್ಪಾಡಿ :ಅಂಗನವಾಡಿ ಪಕ್ಕದಲ್ಲಿದೆ ಅಪಾಯಕಾರಿ ಮರ ಕ್ರಮ ಕೈಗೊಳ್ಳದ ಇಲಾಖೆ

 

error: Content is protected !!
Scroll to Top