ಇಂದು ರಾತ್ರಿ ಕಡಬ ಅನುಗ್ರಹ ಸಭಾ ಭವನದಲ್ಲಿ ನೃತ್ಯ ವೈವಿಧ್ಯ ಕಾರ್ಯಕ್ರಮ ► ಹಿರಿಯ ಉದ್ಯಮಿ ಸಿ.ಫಿಲಿಪ್ ರವರಿಗೆ ಕದಂಬಶ್ರೀ ಪ್ರಶಸ್ತಿ ಪ್ರದಾನ

(ನ್ಯೂಸ್ ಕಡಬ) newskadaba.com ಕಡಬ, ಅ.07. ಜೇಸಿಐ ಕಡಬ ಕದಂಬ ಮತ್ತು ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಜೇಸಿ ಸಪ್ತಾಹ ಕಾರ್ಯಕ್ರಮ ಕದಂಬೋತ್ಸವ – 2017 ಸಮಾರೋಪ ಸಮಾರಂಭವು ಇಂದು ಸಂಜೆ ಕಡಬದ ಅನುಗ್ರಹ ಸಭಾ ಭವನದಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ಹಿರಿಯ ಉದ್ಯಮಿ, ಕಡಬ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷರಾದ ಶ್ರೀ ಸಿ.ಫಿಲಿಪ್ ರವರಿಗೆ ಕದಂಬಶ್ರೀ – 2017 ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಂತರ ಆಲಂಕಾರು ದೇವಿ ನಗರದ ನಕ್ಷತ್ರ ಕಲಾ ತಂಡದವರಿಂದ ‘ನೃತ್ಯ ವೈವಿಧ್ಯ’ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group