ಕಡಬ: ಸಸ್ಯಾಹಾರಿ ಹೋಟೆಲ್ ಶ್ರೀ ಗುರುಕೃಪಾ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಡಿ.01. ಇಲ್ಲಿನ ಮುಖ್ಯರಸ್ತೆಯ ಕೆ.ಜೆ.ಚಿಕನ್ ಬಳಿಯ ವಿನಾಯಕ ಕಾಂಪ್ಲೆಕ್ಸ್ ನಲ್ಲಿ ಸಸ್ಯಾಹಾರಿ ಊಟ ಹಾಗೂ ಉಪಹಾರ ಮಂದಿರ ಹೋಟೆಲ್ ಶ್ರೀ ಗುರುಕೃಪಾ ಸೋಮವಾರದಂದು ಶುಭಾರಂಭಗೊಂಡಿತು.

ಸಂಸ್ಥೆಯ ಮಾಲಕರ ಮಾತೃಶ್ರೀಯವರಾದ ಶುಭಾವತಿ ರೈ ಬೆದ್ರಾಜೆ ದೀಪ ಬೆಳಗಿಸುವುದರ ಮೂಲಕ ನೂತನ ಹೋಟೆಲನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಟ್ಟಡ ಮಾಲಕರಾದ ಸುಂದರ ನಾಯ್ಕ್, ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿಯ ಅಧ್ಯಕ್ಷರಾದ ಸೋಮಪ್ಪ ನಾಯ್ಕ್, ಶ್ರೀಮತಿ ಶ್ರೀ ಜಗನ್ನಾಥ ಶೆಟ್ಟಿ ಕಾರ್ಯಾನ, ರತ್ನಾಕರ ರೈ ನೈತಿನಡ್ಕ, ಮೊದಲಾದವರು ಉಪಸ್ಥಿತರಿದ್ದರು.

Also Read  ಇಂದು(ಅ.30) ಸಂಸದ ಬ್ರಿಜೇಶ್‌ ಚೌಟ ಸಾರ್ವಜನಿಕ ಭೇಟಿಗೆ ಲಭ್ಯ

ಸಂಸ್ಥೆಯ ಮಾಲಕರಾದ ಮನೋಹರ್ ರೈ ಬೆದ್ರಾಜೆ, ಹರಿಪ್ರಸಾದ್ ರೈ ಬೆದ್ರಾಜೆ ಹಾಗೂ ರಂಜಿತ್ ರೈ ಬೆದ್ರಾಜೆ ಅತಿಥಿಗಳನ್ನು ಸ್ವಾಗತಿಸಿ ಬರಮಾಡಿಕೊಂಡರು.

error: Content is protected !!
Scroll to Top