ಪಣಂಬೂರು ಕಡಲತೀರದಲ್ಲಿ ಸ್ವಚ್ಛತಾ ಅಭಿಯಾನ

(ನ್ಯೂಸ್ ಕಡಬ) newskadaba.com ಮಂಗಳೂರು ಡಿ. 01: ಜಿಲ್ಲಾ ಗೃಹರಕ್ಷಕ ದಳ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೌರ ರರಕ್ಷಣಾ ತಂಡದ ವತಿಯಿಂದ ನವೆಂಬರ್ 29ರಂದು ಕಡಲ ತೀರ ಸ್ವಚ್ಛತಾ ಅಭಿಯಾನವು ಪಣಂಬೂರು ಬೀಚ್‍ನಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿ ಗೋಪಾಲಕೃಷ್ಣ ದೇಲಂಪಾಡಿ ಮಾತನಾಡಿ ಕೋವಿಡ್-19 ರೋಗ ಹರಡುವ ಸಂದರ್ಭ ಕೆಲಸ ನಿರ್ವಹಿಸುವ ಗೃಹರಕ್ಷಕರಿಗೆ ಆರೋಗ್ಯದೃಷ್ಟಿಯಿಂದ ಈ ಶಿಬಿರ ಹೆಚ್ಚು ಉಪಯುಕ್ತ ಮತ್ತು ಗೃಹರಕ್ಷಕರ ರಕ್ಷಣಾ ವ್ಯವಸ್ಥೆಯನ್ನು ವೃದ್ಧಿಸಿ, ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದರು.  ಕಾರ್ಯಕ್ರಮದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗಳಾದ ಸುನಿಲ್ ಕುಮಾರ್, ದಿವಾಕರ್, ಸುನಿಲ್, ನಿಶಾಲ್, ದುಶ್ಯಂತ್ ರೈ, ಸರಸ್ವತಿ, ಕವಿತಾ, ಪೌರರಕ್ಷಣಾ ಪಡೆಯ ಅಜಯ್ ಹಾಗೂ ಇನ್ನಿತರ ಗೃಹರಕ್ಷಕ/ಗೃಹರಕ್ಷಕಿಯರು ಹಾಜರಿದ್ದರು.

Also Read  ಬಂಟ್ವಾಳ: ಮನೆಯವರು ಮಲಗಿದ್ದ ವೇಳೆ ಕಳ್ಳರ ಕೈಚಳಕ ➤ 12 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

error: Content is protected !!
Scroll to Top