ಮಂಗಳೂರು :ಮೀನುಗಾರಿಕಾ ಬೋಟು ದುರಂತ ➤ ಇಬ್ಬರ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು ಡಿ. 01: ಉಳ್ಳಾಲದ ಪಶ್ಚಿಮ ಭಾಗದ ಸಮುದ್ರದಲ್ಲಿ ಸೋಮವಾರ ಸಂಜೆ ಸಂಭವಿಸಿದ ಬೋಟ್ ದುರಂತದ ವೇಳೆ ನಾಪತ್ತೆಯಾಗಿದ್ದ ಆರು ಮಂದಿ ಮೀನುಗಾರರ ಪೈಕಿ ಇಬ್ಬರ ಮೃತದೇಹ ಪತ್ತೆಯಾಗಿದೆ. ತೀವ್ರ ರಕ್ಷಣಾ ಕಾರ್ಯಾಚರಣೆಯ ಬಳಿಕ ಇಬ್ಬರ ಮೃತದೇಹವನ್ನು ಇಂದು ಮಧ್ಯಾಹ್ನದ ವೇಳೆ ಮೇಲೆತ್ತಲಾಗಿದೆ. ಮೃತದೇಹವನ್ನು ಮಂಗಳೂರಿನ ದಕ್ಕೆಗೆ ತರಲಾಗಿದೆ.

ಮಂಗಳೂರಿನಲ್ಲಿ ಮೀನುಗಾರಿಕೆಗೆ ಹೋಗಿ ವಾಪಸ್ ಆಗುತ್ತಿದ್ದ ವೇಳೆ ದೋಣಿ ಮಗುಚಿದೆ. ಪರಿಣಾಮ 6 ಮಂದಿ ನಾಪತ್ತೆಯಾಗಿದ್ದರು. ಅವರಲ್ಲಿ ಇಬ್ಬರ ಮೃತ ದೇಹಗಳು ಪತ್ತೆಯಾಗಿದೆ.ಈ ಘಟನೆ ಮಂಗಳೂರಿನಲ್ಲಿ ನಡೆದಿದ್ದು ಬೋಳಾರ ಮೂಲದ ಶ್ರೀರಕ್ಷಾ ಎಂಬ ಬೋಟ್ ದುರಂತಕ್ಕೀಡಾಗಿದೆ. ಮಂಗಳೂರಿನ ಮೀನುಗಾರಿಕಾ ಬಂದರಿನಿಂದ ಆಳ ಸಮುದ್ರದಾಳದ ಮೀನುಗಾರಿಕೆಗೆ ನ. 30ರ ಸೋಮವಾರ  ಈ ಬೋಟ್ ತೆರಳಿತ್ತು. ಮೀನು ತುಂಬಿಕೊಂಡು ವಾಪಸ್ ಬರುವಾಗ ಗಾಳಿಗೆ ಮಗುಚಿಕೊಂಡು ಬಿದ್ದಿದೆ. ದೋಣಿಯಲ್ಲಿ 20ಕ್ಕೂ ಹೆಚ್ಚು ಮೀನುಗಾರರಿದ್ದು ದುರಂತ ಸಂದರ್ಭದಲ್ಲಿ 16 ಮಂದಿ ಡಿಂಗಿಯಲ್ಲಿ ಕುಳಿತು ಜೀವ ಉಳಿಸಿಕೊಂಡಿದ್ದಾರೆ.

Also Read  ಉಪ್ಪಿನಂಗಡಿ: ಬಸ್ ನಿಂದ ಬಿದ್ದು ಮಹಿಳೆಗೆ ಗಾಯ

 

error: Content is protected !!
Scroll to Top