(ನ್ಯೂಸ್ ಕಡಬ) newskadaba.com ನವದೆಹಲಿ ಡಿ. 01: ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಭಾರೀ ಕುಸಿತವಾಗಿದೆ. ಭಾರತದಲ್ಲಿ ಕಳೆದ 4 ವರ್ಷಗಳಲ್ಲೇ ಅತ್ಯಂತ ಕಡಿಮೆಗೆ ಚಿನ್ನದ ದರ ಕುಸಿದಂತಾಗಿದೆ. ಪ್ರತೀ ಹತ್ತು ಗ್ರಾಂ ಚಿನ್ನದ ದರದಲ್ಲಿ ಶೇಕಡಾ 6 ರಷ್ಟು ಕುಸಿತ ಕಂಡಿದೆ.
ಭಾರತದಲ್ಲಿ ಕಳೆದ ಅಗಸ್ಟ್ನಲ್ಲಿ ಪ್ರತೀ 10 ಗ್ರಾಂ ಚಿನ್ನದ ಬೆಲೆ 56,200 ರೂಪಾಯಿ ಇತ್ತು, ನಂತರ ಇಲ್ಲಿಯವರೆಗೆ ಒಟ್ಟು 8,500 ರೂಪಾಯಿ ಕುಸಿತವಾಗಿದ್ದು, ಆದರಲ್ಲಿ ಇದೊಂದು ತಿಂಗಳಲ್ಲೇ 3,050 ರೂಪಾಯಿ ಕುಸಿತ ದಾಖಲಾಗಿದೆ. ಇದು ಕಳೆದ ನಾಲ್ಕು ವರ್ಷಗಳಲ್ಲೇ ಅತೀ ಕಡಿಮೆ ಚಿನ್ನದ ದರವಾಗಿದೆ. ಚಿನ್ನದ ಬೆಲೆಯಲ್ಲಿನ ಈ ಭಾರೀ ಕುಸಿತಕ್ಕೆ, ಕೊರೊನಾ ಲಸಿಕೆಯಲ್ಲಿನ ಆಶಾವಾದ ಹಾಗೂ ಅಮೆರಿಕಾದ ರಾಜಕೀಯ ಬೆಳವಣಿಯೇ ಕಾರಣ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.