ಮಂಗಳೂರಿನಲ್ಲಿ ಮತ್ತೊಂದು ದೋಣಿ ದುರಂತ ➤ 6 ಮಂದಿ ಮೀನುಗಾರರು ನಾಪತ್ತೆ!

(ನ್ಯೂಸ್ ಕಡಬ) newskadaba.com ಮಂಗಳೂರು ಡಿ. 01: ಮಂಗಳೂರಿನಲ್ಲಿ ಮೀನುಗಾರಿಕೆಗೆ ಹೋಗಿ ವಾಪಸ್ ಆಗುತ್ತಿದ್ದ ವೇಳೆ ದೋಣಿ ಮಗುಚಿದೆ. ಪರಿಣಾಮ 6 ಮಂದಿ ನಾಪತ್ತೆಯಾಗಿದ್ದಾರೆ‌.ಇತ್ತಿಚೇಗೆ ಮೀನುಗಾರಿಕೆ ವೇಳೆ ಒಂದಲ್ಲಾ ಒಂದು ರೋತಿಯಲ್ಲಿ ದೋಣಿ ದುರಂತಗಳು ಸಂಭವಿಸುತ್ತಲೇಯಿದೆ.

 

ಈ ಘಟನೆ ಮಂಗಳೂರಿನಲ್ಲಿ ನಡೆದಿದ್ದು ಬೋಳಾರ ಮೂಲದ ಶ್ರೀರಕ್ಷಾ ಎಂಬ ಬೋಟ್ ದುರಂತಕ್ಕೀಡಾಗಿದೆ. ಮಂಗಳೂರಿನ ಮೀನುಗಾರಿಕಾ ಬಂದರಿನಿಂದ ಆಳ ಸಮುದ್ರದಾಳದ ಮೀನುಗಾರಿಕೆಗೆ ನ. 30ರ ಸೋಮವಾರ  ಈ ಬೋಟ್ ತೆರಳಿತ್ತು. ಮೀನು ತುಂಬಿಕೊಂಡು ವಾಪಸ್ ಬರುವಾಗ ಗಾಳಿಗೆ ಮಗುಚಿಕೊಂಡು ಬಿದ್ದಿದೆ. ದೋಣಿಯಲ್ಲಿ 20ಕ್ಕೂ ಹೆಚ್ಚು ಮೀನುಗಾರರಿದ್ದು ದುರಂತ ಸಂದರ್ಭದಲ್ಲಿ 16 ಮಂದಿ ಡಿಂಗಿಯಲ್ಲಿ ಕುಳಿತು ಜೀವ ಉಳಿಸಿಕೊಂಡಿದ್ದಾರೆ. ನಾಪತ್ತೆಯಾದ 6 ಜನರ ಪತ್ತೆಗಾಗಿ ಕರಾವಳಿ ರಕ್ಷಣಾ ಪಡೆ ಧಾವಿಸಿದೆ.

Also Read  ಕರ್ನಾಟಕದಲ್ಲಿ ಕನ್ನಡ ಬೋರ್ಡ್ ಹಾಕಲೇಬೇಕು-ಹೈ ಕೋರ್ಟ್

 

error: Content is protected !!
Scroll to Top