ಪುತ್ತೂರು: ಅಕ್ರಮ ಗಾಂಜಾ ಮಾರಾಟ ➤ ನಾಲ್ವರು ಆರೋಪಿಗಳು ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 01: ದ.ಕ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಗಾಂಜಾ ಪ್ರಕರಣಗಳು ಕೇಳಿ ಬರುತಿದ್ದು, ಪುತ್ತೂರು ನಗರ ಪೊಲೀಸರು ಇದೀಗ ಮತ್ತೊಮ್ಮೆ ಗಾಂಜಾ ಮಾರಾಟ ಜಾಲವೊಂದನ್ನು ಪತ್ತೆ ಹಚ್ಚಿ ಪುತ್ತೂರಿನ ನೈತಾಡಿ ಸಮೀಪ ಎಸ್.ಐ ಜಂಬೂರಾಜ್ ನೇತೃತ್ವದ ದಾಳಿ ನಡೆಸಿ ಸುಮಾರು 4 ಕೆ.ಜಿ ಗಾಂಜಾ ಸಹಿತ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

 

 

ನೈತಾಡಿ ಸಮೀಪ ಎರಡು ಕಾರಿನಲ್ಲಿ ನಾಲ್ಕು ಮಂದಿ ಅಕ್ರಮವಾಗಿ ಗಾಂಜಾ ಮಾರಾಟ ವ್ಯವಹಾರದ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಎಂ. ಲಕ್ಷ್ಮೀಪ್ರಸಾದ್ ನಿರ್ದೇಶನದಂತೆ ಎ.ಎಸ್ಪಿ. ಲಖನ್ ಸಿಂಗ್ ಯಾದವ್ ಮತ್ತು ನಗರ ಪೊಲೀಸ್ ಠಾಣೆಯ ನಿರೀಕ್ಷಕ ಗೋಪಾಲ್ ನಾಯ್ಕ್ ಅವರ ಮಾರ್ಗದರ್ಶನದಂತೆ ಪೊಲೀಸರು ದಾಳಿ ನಡೆಸಿ, ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಸುಮಾರು 4.ಕೆ.ಜಿ ಗಾಂಜಾವನ್ನು ಮತ್ತು ಕೃತ್ಯಕ್ಕೆ ಬಳಸಿದ ಎರಡು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Also Read  ಕರ್ನಾಟಕದಲ್ಲಿ ದಾಖಲೆಯ ಪಾಸ್‌ಪೋರ್ಟ್‌ ವಿತರಣೆ

 

error: Content is protected !!
Scroll to Top