ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಶವಶೈತ್ಯಾಗಾರ ಸಮರ್ಪಣೆ

(ನ್ಯೂಸ್ ಕಡಬ) newskadaba.com ಬಂಟ್ವಾಳ . 30: ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಅಂತಾರಾಷ್ಟ್ರೀ ಲಯನ್ಸ್ ಸೇವಾ ಸಂಸ್ಥೆ ಜಿಲ್ಲೆ 317ಡಿ ಪ್ರಾಂತ್ಯ-2ರ ಪ್ರಾಂತೀಯ ಸಮ್ಮೇಳನ ಪುನರ್ಜನ್ಮ ನೆನಪಿಗಾಗಿ ನೀಡಲಾದ ಶೈತ್ಯಾಗಾರವನ್ನು ಆಸ್ಪತ್ರೆಯ ಆವರಣದಲ್ಲಿ ಸಮರ್ಪಿಸಲಾಯಿತು.

 

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಈ ಸಂದರ್ಭ ಮಾತನಾಡಿ, ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳ ಜತೆ ಜತೆ ನಿರಂತರ ಸಂಪರ್ಕದಲ್ಲಿದ್ದು, ಅಗತ್ಯಗಳಿಗೆ ಸ್ಪಂದನೆ ನೀಡುವ ಕಾರ್ಯ ಮಾಡಲಾಗುತ್ತಿದೆ. ಇಲ್ಲಿ ಎಲ್ಲಾ ವೈದ್ಯರ ಸೇವೆ ಲಭ್ಯವಿದ್ದು, ರೋಗಿಗಳಿಗೆ ಉತ್ತಮ ಸೇವೆ ಲಭ್ಯವಾಗುತ್ತಿದೆ. ಶೀಘ್ರದಲ್ಲಿ ಐಸಿಯು ಬೆಡ್ಗಳ ವ್ಯವಸ್ಥೆಯನ್ನೂ ಒದಗಿಸಲಾಗುತ್ತದೆ ಎಂದರು. ಪ್ರಾಂತ್ಯ-2ರ ಪ್ರಾಂತೀಯ ಅಧ್ಯಕ್ಷ ಸಂಜೀವ ಬಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

 

Also Read  ಉಡುಪಿ: ಸಿಡಿಲು ಬಡಿದು ಬೆಂಕಿಗಾಹುತಿಯಾದ ಹೋಟೆಲ್

ಮಾಜಿ ಸಚಿವ ಬಿ.ರಮಾನಾಥ ರೈ, ಬಂಟ್ವಾಳ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಲಯನ್ಸ್ ಜಿಲ್ಲಾ ಗವರ್ನರ್ ಡಾ.ಗೀತಪ್ರಕಾಶ್, ಮಾಜಿ ಗವರ್ನರ್ ಹರಿಕೃಷ್ಣ ಪುನರೂರು, ಪ್ರಥಮ ಉಪಗವರ್ನರ್ ವಸಂತಕುಮಾರ್ ಶೆಟ್ಟಿ, ದ್ವಿತೀಯ ಉಪಗವರ್ನರ್ ಎಸ್.ಸಂಜೀತ್ ಶೆಟ್ಟಿ, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ಕೃಷ್ಣಶ್ಯಾಮ್, ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಪುಷ್ಪಲತಾ ಅತಿಥಿಗಳಾಗಿ ಭಾಗವಹಿಸಿದ್ದರು.ಇನ್ನು ಈ ಕಾರ್ಯಕ್ರಮದಲ್ಲಿ ಆನೇಕ ಗಣ್ಯರು ಪಾಲ್ಗೊಂಡಿದ್ದರು.

error: Content is protected !!
Scroll to Top