ಪುತ್ತೂರು: ಮಾಹಿತಿ ಹಕ್ಕಿನಲ್ಲಿ ಮಾಹಿತಿ ನೀಡಲು ನಿರಾಕರಣೆ ► ಕಾರ್ಮಿಕ ಇಲಾಖಾ ಅಧಿಕಾರಿ ವಿರುದ್ಧ ದೂರು

(ನ್ಯೂಸ್ ಕಡಬ) newskadaba.com ಪುತ್ತೂರು, ಅ.07. ಪುತ್ತೂರು ತಾಲೂಕಿನ ಕಾರ್ಮಿಕ ಇಲಾಖಾ ಹಿರಿಯ ಅಧಿಕಾರಿಯಲ್ಲಿ ಇಲಾಖಾ ಮಾಹಿತಿ ಕೋರಿ ಮಾಹಿತಿ ಹಕ್ಕಿನಡಿ ಅರ್ಜಿ ಹಾಕಿದ್ದ ಮಾಹಿತಿ ಹಕ್ಕು ಕಾರ್ಯಕರ್ತರೋರ್ವರಿಗೆ ಅಧಿಕಾರಿಯು ಮಾಹಿತಿ ನಿರಾಕರಿಸಿದ್ದಾರೆ.

ಈ ಬಗ್ಗೆ ಕಾರ್ಯಕರ್ತ ಮೇಲಾಧಿಕಾರಿಗೆ ಅಫೀಲು ಮಾಡಿದ ಹಿನ್ನೆಲೆಯಲ್ಲಿ ಅದೇ ಅಧಿಕಾರಿ ಮತ್ತೆ ಮಾಹಿತಿ ನೀಡಿದ ಘಟನೆ ನಡೆದಿದೆ. ಪುತ್ತೂರು ತಾಲೂಕಿನ ಕಬಕ ಸಂಜೀವ ಎಂಬುವವರು ಕಾರ್ಮಿಕ ಇಲಾಖೆಯಲ್ಲಿನ ಕೆಲವು ಮಾಹಿತಿಯನ್ನು ಕೋರಿ ಅಗೋಸ್ತು.26 ರಂದು ಮಾಹಿತಿ ಅರ್ಜಿ ಹಾಕಿದ್ದರು. ಆದರೆ ಅವರಿಗೆ ಕೋರಿದ ಮಾಹಿತಿ ನೀಡದೆ ಕಛೇರಿಗೆ ಕಳುಹಿಸಲಾದ ಅರ್ಜಿ ಮತ್ತು ಪೋಸ್ಟಲ್ ಆರ್ಡ್ರನ್ನು ಸಂಜೀವ ಅವರಿಗೆ ವಾಪಸ್ಸು ಕಳುಹಿಸಿದ್ದರು.

ಹಿರಿಯ ಕಾರ್ಮಿಕ ಇಲಾಖಾ ಅಧಿಕಾರಿ ಮಾಹಿತಿ ಹಕ್ಕು ಅಧಿಕಾರಿಯಲ್ಲದ ಕಾರಣ ಮಂಗಳೂರಿನ ಇಲಾಖಾಧಿಕಾರಿಯಲ್ಲಿ ಮಾಹಿತಿ ಕೋರಿ ಎಂದು ಉಲ್ಲೇಖೆಸಿ ಲಿಖಿತ ರೂಪದಲ್ಲಿ ತಿಳಿಸಿದ್ದರು. ಇದನ್ನು ಪ್ರಶ್ನಿಸಿ ಮೇಲಾಧಿಕಾರಿಗೆ ಸೆಪ್ಟಂಬರ್ 7 ರಂದು ದೂರು ನೀಡಿದ್ದರು. ಬಳಿಕ ಸೆಪ್ಟಂಬರ್.26 ರಂದು ಪುತ್ತೂರು ಹಿರಿಯ ಕಾರ್ಮಿಕ ನಿರೀಕ್ಷಕ ರಾಮಚಂದ್ರ ಎಚ್ ಎನ್ನುವ ಸಹಿಯುಲ್ಲ ಪ್ರತಿಯಲ್ಲಿ ಸಂಜೀವ ಅವರಿಗೆ ಮಾಹಿತಿ ಲಭಿಸಿದೆ.

Also Read  ಕಲ್ಲುಗುಡ್ಡೆ ಅಂಗನವಾಡಿ ಮೇಲ್ಚಾವಣಿ ಕಾಮಗಾರಿ ಪರಿಶೀಲನೆ

ಪುತ್ತೂರು ಇಲಾಖೆ ವಿರುದ್ದ ಆರೋಪಗಳು

ಪುತ್ತೂರು ತಾಲೂಕಿನ ಕಾರ್ಮಿಕ ಇಲಾಖೆಯಲ್ಲಿ ಫಲಾನುಭವಿಗಳಿಗೆ ಸರಿಯಾದ ಮಾಹಿತಿ ದೊರೆಯುತ್ತಿಲ್ಲ. ಕಾರ್ಮಿಕ ಇಲಾಖೆಯ ಸದಸ್ಯತ್ವ ಹೊಂದಿರುವ ಜನತೆ ತಮಗೆ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿ ಕೇಳಲು ತೆರಳಿದರೆ ಸರಿಯಾದ ಮಾಹಿತಿ ನೀಡದೆ ಅಧಿಕಾರಿ ಉಡಾಫೆಯಾಗಿ ವರ್ತಿಸುತ್ತಾರೆ . ಅಲ್ಲದೆ ಇಲ್ಲಿನ ಸಿಬ್ಬಂದಿಯೂ ಉದ್ದಟತನ ತೋರುತ್ತಾರೆ ಎನ್ನುವ ಆರೋಪವೂ ವ್ಯಕ್ತವಾಗುತ್ತಿದೆ. ಇಲಾಖೆಯಲ್ಲಿ ಮದ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು ಗ್ರಾಮೀಣ ಭಾಗದ ಜನತೆಯ ಮುಗ್ದತೆಯನ್ನು ಬಳಸಿಕೊಂಡು ಹಣ ಪೀಕಿಸುತ್ತಿದ್ದಾರೆ. ಮದ್ಯವರ್ತಿಗಳು ಇಲ್ಲದೆ ಇಲ್ಲಿ ಕೆಲಸವಾಗುತ್ತಿಲ್ಲ ಎಂದು ಆರೋಪಿಸಿ ರಾಮಕುಂಜ ನಿವಾಸಿ ಕರುಣಾಕರ ಎಂಬುವವರು ರಾಜ್ಯ ಕಾರ್ಮಿಕ ಇಲಾಖೆಯ ಸಚಿವರಿಗೆ, ರಾಜ್ಯಪಾಲರಿಗೆ ಮತ್ತು ಇಲಾಖಾ ಹಿರಿಯ ಅಧಿಕಾರಗಳಿಗೆ ಪತ್ರ ಮುಖೇನೆ ತಿಳಿಸಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಸಂಜೀವ ಕಬಕ, ಮಾಹಿತಿ ಹಕ್ಕು ಕಾರ್ಯಕರ್ತ
ಮಾಹಿತಿ ನೀಡಲು ನಿರಾಕರಿಸಿ ಬಳಿಕ ಅದೇ ಅಧಿಕಾರಿ ಮತ್ತೆ ಮಾಹಿತಿ ನೀಡಿರುವುದು ಅಪರೂಪದ ಅಧಿಕಾರಿ ಮಾಹಿತಿ ಹಕ್ಕಿನ ನಿಯಮವನ್ನು ಉಲ್ಲಂಘಿಸಿದ್ದಾರೆ. ಈ ಬಗ್ಗೆ ನ್ಯಾಯಲಯದ ಮೊರೆ ಹೊಗಲಾಗುವುದು. ಯಾಕೆಂದರೆ ಜನ ಸಾಮನ್ಯನಿಗೆ ಇಲಾಖೆಯ ಮಾಹಿತಿ ನೀಡಲು ಬೇಜವ್ದಾರಿ ತೋರಿಸುವುದು ಮುಂದೆ ಯಾರಿಗೂ ಆಗಬಾರದು. ಕಾನೂನನ್ನು ಉಲ್ಲಂಘಿಸಿ ಕೆಲಸ ಮಾಡುವ ಪ್ರತಿಯೊಬ್ಬ ಅಧಿಕಾರಿಗೂ ಪಾಠವಾಗಬೇಕು. ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ.

error: Content is protected !!
Scroll to Top